ಯುವ ಕಾಂಗ್ರೆಸ್ ಚುನಾವಣೆ ಮರಿಸ್ವಾಮಿ ಆಯ್ಕೆ

Oplus_131072
Oplus_131072
Published on

ರಾಯಚೂರು. ಜಿಲ್ಲೆಯಲ್ಲಿ ಕಳೆದ ಸುಮಾರು ದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ರಾಯಚೂರು ಜಿಲ್ಲಾ ಯುವ ಕಾಂಗ್ರೆೆಸ್ ಚುನಾವಣೆಯಲ್ಲಿ 23,323 ಮತಗಳಿಂದ ಮರಿಸ್ವಾಮಿ  ಬಿಚ್ಚಾಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಾರೆ.

ಎಂಎಲ್ಸಿ ಎ.ವಸಂತಕುಮಾರ್ ಹಾಗೂ ಶಾಸಕ ಬಸನಗೌಡ ದದ್ದಲ್ ಬೆಂಬಲದೊಂದಿಗೆ ಸ್ಪರ್ಧೆ ಮಾಡಿದ್ದ ಎ.ಅಭಿಲಾಷ್ ವಸಂತಕುಮಾರ್ 17,184ಮತ ಪಡೆದು 6139 ಮತಗಳೊಂದಿಗೆ ಸೋಲನ್ನಪ್ಪಿ ಯುವ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆೆ ತೃಪ್ತಿ ಪಡುವಂತಾಗಿದೆ.

ಇನ್ನೂ ರಾಯಚೂರು ಗ್ರಾಾಮಾಂತರ ವಿಧಾನಸಭೆ ಹಾಗೂ ಗಿಲ್ಲೇಸೂಗೂರು ಬ್ಲಾಕ್ ಯುವ ಘಟಕಗಳಿಗೆ ಶಾಸಕ ಬಸನಗೌಡ ದದ್ದಲ್ ಅವರ ಆಪ್ತರೆ ಗೆಲುವು ಸಾಧಿಸಿದ್ದಾಾರೆ.ಅವರ ವಿರೋಧಿ ಬಣದಿಂದ ಸ್ಪರ್ಧಿಸಿದ್ದವರ ಪೈಕಿ ಚಂದ್ರಬಂಡಾ ಬ್ಲಾಕ್‌ನಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಯುವಾಧ್ಯಕ್ಷರಾಗಿ ಸಂತೋಷ್ 3335 ಮತ ಪಡೆದರೆ, ಅವರ ಪ್ರತಿ ಸ್ಪರ್ಧಿ ಕೆ.ಎಂ.ವೀರೇಶ 2153 ಮತ ಪಡೆದು 1182 ಮತಗಳ ಅಂತರದಲ್ಲಿ ಸಂತೋಷ್ ಗ್ರಾಾಮಾಂತರ ಕ್ಷೇತ್ರದ ಯುವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗಿಲ್ಲೇಸೂಗೂರು ಬ್ಲಾಕ್ ಕಾಂಗ್ರೆೆಸ್‌ ಯುವಾಧ್ಯಕ್ಷ ಸ್ಥಾನಕ್ಕೆೆ ಸ್ಪರ್ಧಿಸಿದ್ದ ಕೆ.ಎನ್.ವೇಣುಗೋಪಾಲ 2211 ಮತ ಪಡೆದರೆ, ಸಿದ್ದು 1121 ಮತ ಪಡೆದರು. 1090 ಮತಗಳ ಅಂತರದಲ್ಲಿ ಕೆ.ಎನ್.ವೇಣುಗೋಪಾಲ ಗಿಲ್ಲೇಸೂಗೂರು ಬ್ಲಾಕ್ ಯುವ ಕಾಂಗ್ರೆೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.

ಚಂದ್ರಬಂಡಾ ಬ್ಲಾಕ್ ಯುವ ಘಟಕದ ಅಧ್ಯಕ್ಷರಾಗಿ ಗೌಸ್ 1467 ಮತ ಪಡೆದರೆ, ಬಾಹುವುದ್ದೀನ್ 872 ಮತ ಪಡೆದರು. ಗೌಸ್ 595 ಮತಗಳ ಅಂತರದಿಂದ ಯುವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಾಯಚೂರು ನಗರ ಕಾಂಗ್ರೆೆಸ್ ಯುವಾಧ್ಯಕ್ಷರಾಗಿ ಎಂ.ಡಿ. ಶಹಬಾಜ್ ಆಯ್ಕೆಯಾಗಿದ್ದಾರೆ. ಉಳಿದ ಪದವಿಗಳಿಗೆ ಸ್ಪರ್ಧಿಸಿದವರ ಫಲಿತಾಂಶ ಇನ್ನೂ ಬಿಡುಗಡೆಯಾಗಬೇಕಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net