

ಶಿರಸಿ: ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಭಾರತದ ಸೈನಿಕರಿಗೆ ಶಕ್ತಿ ನೀಡಲೆಂದು ಪ್ರಾರ್ಥಿಸಿ ಶಾಸಕ ಭೀಮಣ್ಣ ನಾಯ್ಕ ಮಾರಿಕಾಂಬಾ ದೇವಿಗೆ ಶನಿವಾರ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರು ಪಹಲ್ಗಾಮದಲ್ಲಿ ನಮ್ಮ ಭಾರತೀಯರ ನೆತ್ತರು ಹರಿಸಿರುವುದು ಸಹಿಸಲಾರದ ಅಕ್ಷಮ್ಯ ಅಪರಾಧ. ಇದಕ್ಕೆ ಪ್ರತೀಕಾರವಾಗಿ ನಾವು ಪಾಕಿಸ್ತಾನಕ್ಕೆ ಉಹಿಸಲಾಗದ, ಮುಟ್ಟಿ ನೋಡಿಕೊಳ್ಳುವಂಥ ತಕ್ಕ ಪಾಠ ಕಲಿಸುತ್ತಿದ್ದೇವೆ. ಉಗ್ರರ ಸ್ಥಾನವಾಗಿರುವ ಪಾಕಿಸ್ತಾನ ಇನ್ನೆಂದೂ ಇಂತಹ ಪಾಪದ ಕೆಲಸಕ್ಕೆ ಮುಂದಾಗಬಾರದು. ಒಮ್ಮೆ ಮಾಡಿದರೆ ಭಾರತದಿಂದ ಎಂತಹ ಪಾಠ ಕಲಿಯಬಹುದೆಂದು ಇಡೀ ಜಗತ್ತೆ ನೋಡುತ್ತಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸತೀಶ ನಾಯ್ಕ, ನಾಗರಾಜ ಮುರುಡೇಶ್ವರ, ಪ್ರದೀಪ ಶೆಟ್ಟಿ, ಗಣೇಶ ದಾವಣಗೆರೆ, ಶೈಲೇಶ ಜೋಗಳೆಕರ್, ವಿವೇಕ ಪೂಜಾರಿ, ಜೋಫಿ ಪೀಟರ್, ಬಾಳಾ ರೇವಣಕರ್, ಇತರರಿದ್ದರು.