

ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆ ಎಂದು ಕರೆಸಿಕೊಂಡ ನಗರದ ಮಾರಿಕಾಂಬಾ ದೇವಿ ಜಾತ್ರೆ ಮಾ. 19ರಿಂದ ಆರಂಭಗೊಳ್ಳಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಮಾರಿಕಾಂಬಾ ದೇವಸ್ಥಾನದ ವಿಶೇಷ ಆಕರ್ಷಣೆಗಳಲ್ಲೊಂದು ಇಲ್ಲಿಯ ಗೋಡೆಗಳಲ್ಲಿರುವ ಕಾವಿ ಕಲೆ. ಹೊರ ಜಿಲ್ಲೆಗಳಿಂದ ಬರುವ ಭಕ್ತರು, ಪ್ರವಾಸಿಗರು ಇಲ್ಲಿಯ ಕಾವಿ ಕಲೆಗೆ ಮೈ ಮರೆಯುತ್ತಾರೆ. ದೇವಾಲಯದ ಒಳಗೋಡೆಗಳು, ಮುಖ ಮಂಟಪ ಮತ್ತು ಪ್ರಧಾನ ಗೋಡೆಗಳಲ್ಲಿ ಈ ಕಾವಿ ಕಲೆ ಕಂಗೊಳಿಸುತ್ತದೆ. ಮಾರಿಕಾಂಬಾ ದೇವಿಯ ಜಾತ್ರೆಯ ವರ್ಷ ಕಾವಿಕಲೆಗೆ ಹೊಳಪು ನೀಡುವ ಜೊತೆ ಅಗತ್ಯವಿರುವಲ್ಲಿ ಪೇಂಟಿAಗ್ ಮಾಡಿ ಮತ್ತೆ ಕಾವಿ ಕಲೆ ಅರಳಿಸಲಾಗುತ್ತದೆ. ಜ.31ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚಲಾಗಿದ್ದು, ಆ ಬಳಿಕ ದೇವಾಲಯದ ಆವರಣ ಶುಭ್ರಗೊಳಿಸಿ ಕಾವಿಕಲೆಗೆ ಮತ್ತೆ ರಂಗು ನೀಡಲು ಪ್ರಾರಂಭಿಸಲಾಗಿದೆ.
ದೇವಾಲಯದ ಗರ್ಭಗುಡಿ, ಗಂಟೆ ಮಂಟಪ, ಚಂದ್ರಶಾಲೆ ಮತ್ತು ಸಭಾಭವನದಲ್ಲಿ ಕಾವಿಕಲೆ ಬಿಡಿಸುವ ಕಾರ್ಯ ಈಗ ಪ್ರಗತಿಯಲ್ಲಿದೆ. ದೇವಾಲಯದ ಎದುರಿನ ಗೋಡೆಗಳಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕಾವಿಕಲೆ ಬಿಡಿಸಲಾಗುತ್ತಿದ್ದು, ಕಳೆದ ಜಾತ್ರೆಯಲ್ಲಿ ಈ ಕಾರ್ಯ ನಡೆಸಿದ್ದರಿಂದ ಈ ವರ್ಷ ದೇವಾಲಯದ ಒಳಭಾಗದ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ಮಾರಿಕಾಂಬಾ ದೇವಾಲಯದ ಆಕರ್ಷಣೆಯಾದ ಕಾವಿಕಲೆ ಮಹಾರಾಷ್ಟçದ ಸಾವಂತವಾಡಿಯ ಕಾರ್ಮಿಕರಿಂದ ಆರಂಭಗೊAಡಿದೆ ಎನ್ನಲಾಗುತ್ತದೆ. ಮಾರಿಕಾಂಬಾ ದೇವಸ್ಥಾನ ನಗರದ ಬೇರೆ ಕಡೆ ಇತ್ತಾದರೂ ಈಗಿರುವ ಜಾಗದಲ್ಲಿ 1689ರಲ್ಲಿ ಸ್ಥಾಪನೆಯಾಗಿದೆ. ಸೋದೆ ಅರಸರ ಕಾಲದಲ್ಲಿ ಮಹಾರಾಷ್ಟçದ ಸಾವಂತವಾಡಿಯಿAದ ಕಾರ್ಮಿಕರನ್ನು ತಂದು ದೇವಾಲಯಕ್ಕೆ ಕೆಂಪು ಕಲ್ಲಿನ ಭದ್ರ ಕಟ್ಟಡ ನಿರ್ಮಿಸಿರುವ ಬಗ್ಗೆ ಇತಿಹಾಸವಿದೆ. ಕುಶಲ ಕರ್ಮಿಗಳಾದ ಸಾವಂತವಾಡಿಯವರು ದೇವಾಲಯ ನಿರ್ಮಾಣವಾದ ಬಳಿಕ ಗೋಡೆಗಳಿಗೆ ಅವರೇ ಕಾವಿಕಲೆ ಬಿಡಿಸಿದ್ದರು. ಆ ಬಳಿಕ ದೇವಾಲಯದ ಗೋಡೆಗಳಿಗೆ ಕಾವಿಕಲೆ ಪದ್ಧತಿಯನ್ನೇ ಮುಂದುವರಿಸಿಕೊAಡು ಬರಲಾಗಿದೆ.
ನಗರದ ಕಲಾವಿದರಾದ ಸಚಿನ್ ಗುಡಿಗಾರ ಮತ್ತು ಸುಧಾಕರ ಗುಡಿಗಾರ ಕಳೆದ ಕೆಲ ದಿನಗಳಿಂದ ತಂಡದೊAದಿಗೆ ಕಾವಿಕಲೆ ಬಿಡಿಸುವುದರಲ್ಲಿ ನಿರತರಾಗಿದ್ದಾರೆ. ಗಾರೆ ಸುಣ್ಣ ಮತ್ತು ಕೆಂಪು ಮಣ್ಣು ಮಿಶ್ರಣ ಮಾಡಿ ಅಂದಿನ ದಿನಗಳಲ್ಲಿ ಕಾವಿಕಲೆ ಬಿಡಿಸಲಾಗುತ್ತಿತ್ತಾದರೂ ಮಳೆ ಮತ್ತು ಬಿಸಿಲಿನಿಂದಾಗಿ ಶೀಘ್ರದಲ್ಲಿಯೇ ಅಳಿಸಿಹೋಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಆಯಿಲ್ ಪೇಂಟ್ ಬಳಸಿ ಕಾವಿಕಲೆ ರಚಿಸುತ್ತಿದ್ದೇವೆ ಎನ್ನುತ್ತಾರೆ ಈ ಕಲಾವಿದ ಸಹೋದರರು.
ಇದನ್ನೂ ಓದಿ: ಮೀನು ಹಿಡಿಯಲು ತೆರಳಿದ ತಂದೆ-ಮಗ ಸಾವು