ಮೇನಲ್ಲಿ ಮಾರಿಕಾಂಬ ಜಾತ್ರಾ ಮಹೋತ್ಸವ

18 nrp 2
Published on

ಎನ್.ಆರ್.ಪುರ: ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಆಚರಣೆಗೆ ಸಂಬಂಧ ದಿನಾಂಕ ನಿಗದಿ ಮಾಡುವ ಬಗ್ಗೆ ಈ ಹಿಂದಿನಿಂದ ಆಚರಿಸಿಕೊಂಡು ಬಂದಂತೆ ಪಟ್ಟಣದ ನಾಡಿಗರ ಮನೆತನದ ಕುಟುಂಬದವರಾದ ಪ್ರಕಾಶ್ ನಾಡಿಗ್ ಅವರಿಗೆ ಜಾತ್ರಾ ಮಹೋತ್ಸವ ಸಮಿತಿಯಿಂದ ವೀಳ್ಯ ನೀಡಲಾಯಿತು.

ನಾಡಿಗರಾದ ಪ್ರಕಾಶ್ ನಾಡಿಗ್ ಮಾತನಾಡಿ, ಹಿಂದಿನ ಜಾತ್ರಾ ಸಮಯ ಮತ್ತು ಈ ಬಾರಿಯ ಜಾತ್ರೆ ಘಳಿಗೆಯನ್ನು ಕೂಡಿಸಿ ಶೀಘ್ರದಲ್ಲೇ ದಿನಾಂಕ ನಿಗದಿ ಗೊಳಿಸಿಕೊಡಲಾಗುವುದು ಎಂದರು.

ಶ್ರೀ ಕೋಟೆ ಮರಿಕಾಂಬ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಈ ಬಾರಿ ಜಾತ್ರೆಗೆ ಸಂಕಲ್ಪ ಮಾಡಿದ್ದು, ಸಂಪ್ರದಾಯದಂತೆ ಎಲ್ಲ ಕಾರ್ಯಗಳನ್ನೂ ಮಾಡಲಾಗುವುದು. ಮೇ 6,7,8 ಅಥವಾ 20,21,22 ರಂದು ಜಾತ್ರೆ ನಡೆಸುವ ಚಿಂತನೆಯಿದೆ. ನಾಡಿಗರು ಹಾಗೂ ವಿಗ್ರಹ ಕೆತ್ತನೆ ಶಿಲ್ಪಿಗಳ ಹೊಂದಾಣಿಕೆ ದಿನಾಂಕದಂತೆ ಶೀಘ್ರ ಜಾತ್ರೆ ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಿದರು.

ಸಮಿತಿ ಪದಾಕಾರಿಗಳಾದ ಎಚ್.ಎನ್.ರವಿಶಂಕರ್, ಎಚ್.ಎಸ್.ಕೃಷ್ಣಮೂರ್ತಿ, ಕೃಷ್ಣಯ್ಯ ಆಚಾರ್, ಸುನೀಲ್‌ಕುಮಾರ್, ಮಧುಸೂದನ್, ಚಂದ್ರು, ರಘು, ಮಂಜುನಾಥ್‌ಲಾಡ್, ಎನ್.ಜಿ.ನಾಗರಾಜ್, ಅಭಿನವ ಗಿರಿರಾಜ್, ಪಾಂಡೆ, ಎನ್.ಎಂ.ಕಾರ್ತಿಕ್, ರಘು,ಹರೀಶ್, ಶ್ರೀಧರ, ರಾಜೇಂದ್ರ, ಮೂರ್ತಿ, ಸುರೇಶ್, ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net