

ಬೆಳಗಾವಿ: ಗಾಂಜಾ ಮಾರಾಟ ಹಾಗೂ ಸಾಗಣೆ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾ ಪೊಲೀಸರು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ, 704 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಶರದ್ ಧನಪಾಲ ಧನಪ್ಪಗೋಳ (42) ಬಂಧಿತ.
ಕಬ್ಬಿನ ಬೆಳೆ ಮಧ್ಯೆ ಗಾಂಜಾ ಬೆಳೆದು ಮಾರಾಟ ಮಾಡಲು ಸಜ್ಜಾಗುತ್ತಿರುವ ಕುರಿತು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು 12,522 ರೂ. ಮೌಲ್ಯದ 174 ಗ್ರಾಂ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಆರ್.ವೈ. ಬಿಳಗಿ, ಎಸ್.ಎಚ್. ದೇವರ, ಎಲ್.ಎಸ್. ಖೋತ, ಎಸ್.ಎ. ಘೋಡಸೆ, ವಿ.ಐ. ಹಡಪದ ಕಾರ್ಯಾಚರಣೆಯಲ್ಲಿದ್ದರು.