ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 1.5 ಲಕ್ಷ ರೂ. ಮೌಲ್ಯದ 1 ಕೆ.ಜಿ. ಗಾಂಜಾ ವಶ

Crime Logo
Published on

ಬ್ಯಾಡಗಿ: ಇಲ್ಲಿಯ ಬೆಟ್ಟದ ಮಲ್ಲೇಶ್ವರ ನಗರದ ಈದ್ಗಾ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು 1.5 ಲಕ್ಷ ರೂ. ಮೌಲ್ಯದ 5 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಖಾದರಸಾಬ ಹುಸೇನಸಾಬ ಬೇಪಾರಿ (38), ರಜತ ಮುನ್ನಾ ಬೇಪಾರಿ (18) ಹಾಗೂ ರಾಯಚೂರು ಜಿಲ್ಲೆ ಸಿಂದನೂರ ಪಟ್ಟಣದ ಕಾಟಿಬೇಸ್‌ನ ನಿವಾಸಿ ಮೌಲಾಸಾಬ ಮಹ್ಮದಶೇಖಹುಸೇನ (60) ಬಂಧಿತ ಆರೋಪಿಗಳು.
ಇವರಿಂದ 1.5 ಲಕ್ಷ ರೂ. ಮೌಲ್ಯದ ಗಾಂಜಾ ಹೂವು, ಮೊಗ್ಗು ಹಾಗೂ ಬೀಜ ಮಿಶ್ರಿತ ಗಾಂಜಾದ ಚೀಲ ಮತ್ತು 4 ಪೇಟರ್ ಪ್ಯಾಕ್‌ನ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇವರು ಈದ್ಗಾ ಮೈದಾನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net