ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Crime Logo
Published on

ಬಂಕಾಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು 35 ಸಾವಿರ ರೂ. ಮೌಲ್ಯದ 718 ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ಇಲ್ಲಿಯ ಟೋಲ್‌ನಾಕಾ ಬಳಿ ಸೋಮವಾರ ನಡೆದಿದೆ.
ಪಟ್ಟಣದ ಖಾದರಗೌಸ್ ಹಜರತಸಾಬ ಸಂಶಿ (22), ಮಾಲತೇಶ ಪ್ರಕಾಶ ಆಲದಕಟ್ಟಿ (21) ಹಾಗೂ ಶಿವಶಂಕರ ಈರಪ್ಪ ಬಳಿಗಾರ (24) ಬಂಧಿತ ಆರೋಪಿಗಳು. ಇವರಿಂದ 35 ಸಾವಿರ ರೂ. ಮೌಲ್ಯದ 715 ಗ್ರಾಂ ಗಾಂಜಾ, ಮೂರು ಮೊಬೈಲ್, ಒಂದು ಬೈಕ್ ಹಾಗೂ ಗಾಂಜಾ ಸೇದುವ ಮಣ್ಣಿನ ಚಿಲುಮೆ ವಶಪಡಿಸಿಕೊಳ್ಳಲಾಗಿದೆ.
ಇವರು ಟೋಲ್‌ನಾಕಾ ಬಳಿ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತ ಓಡಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net