ಗಾಂಜಾ ಮಾರಾಟ, ಇಬ್ಬರ ಬಂಧನ

12manju6-Web
ಪೊಲೀಸರ ವಶದಲ್ಲಿರುವ ಬಂಧಿತರು.
Published on

ಬೆಳಗಾವಿ: ಗಾಂಜಾ ಮಾರಾಟ ಅಡ್ಡೆಯ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿ, 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಶೋಕ ನಗರದ ಶಾಹೀದ್ ಸಲೀಂ ಪೀರಜಾದೆ (21), ಸಂಭಾಜಿ ನಗರದ ಕಮರುದ್ದಿನ್ ಖಲೀಪಾ (25) ಬಂಧಿತರು. ನಗರದಲ್ಲಿ ವಿವಿಧ ಭಾಗಗಳಲ್ಲಿ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ದೂರಿನ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ 9 ಸಾವಿರ ರೂ. ಮೌಲ್ಯದ 700 ಗ್ರಾಂ. ಗಾಂಜಾ, 730 ರೂ. ನಗದು, 70 ಸಾವಿರ ರೂ. ಮೌಲ್ಯದ ಆಟೋ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಖಡೇಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net