

ಗೋಕರ್ಣ: ಇಲ್ಲಿನ ಮೇನ್-ಬೀಚ್‌ನ ಸಾರ್ವಜನಿಕ ಸ್ಥಳದಲ್ಲಿ ಮಂಗಳವಾರ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಮೇಲೆ ಸ್ಥಳೀಯ ಪೊಲೀಸ್ ಇನಸ್ಪೆಕ್ಟರ್ ವಸಂತ ಆಚಾರ್ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಚಿಕ್ಕಬಾಣಾವರದ ಪದ್ಮನಾಭ ಶ್ರೀಹರಿ ಪಾಟೀಲ್(25) ಮತ್ತು ಬೆಂಗಳೂರು ಟಿ. ದಾಸರಹಳ್ಳಿಯ ಸೂರಜಕುಮಾರ ದಿನೇಶ ಮಂಡಲ್(27) ಆರೋಪಿತರು. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢ ಪಟ್ಟಿರುವುದಾಗಿ ಪೊಲೀಸ್ ವರದಿಯಲ್ಲಿ ದಾಖಲಿಸಲಾಗಿದೆ.