ಮರಿಯಮ್ಮನಹಳ್ಳಿಯಲ್ಲಿ ಬೈಕ್, ಕಬ್ಬಿಣ ಕಳ್ಳರ ಬಂಧನ: 2.50 ಲಕ್ಷ ರೂ.ಮೌಲ್ಯದ ವಸ್ತುಗಳ ಜಪ್ತಿ

MM Halli Thief Arrtest
ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕಳ್ಳರಿಂದ ಬೈಕ್ ಹಾಗೂ ಕಬ್ಬಿಣದ ಬಿಡಿ ಭಾಗಗಳ ವಶಕ್ಕೆ ಪಡೆದಿರುವುದು.
Published on

ಮರಿಯಮ್ಮನಹಳ್ಳಿ: ಬೈಕ್ ಹಾಗೂ ಕಬ್ಬಿಣದ ಬಿಡಿ ಭಾಗಗಳ ಕಳ್ಳರನ್ನು ಪಟ್ಟಣದ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಮೀನಾಕ್ಷಿ ನೇತೃತ್ವದ ತಂಡ ಶುಕ್ರವಾರ ಬಂಧಿಸಿದೆ.

ಹನುಮನಹಳ್ಳಿ ಗ್ರಾಮದ ಬಿ.ಅಂಜಿನಪ್ಪ, ಸಿದ್ಲಿಂಗ, ಭೋವಿ ಮಂಜುನಾಥ, ಎರಡು ತಲೆ ದುರುಗಪ್ಪ, ಕವಿರಾಜ ಹಾಗೂ ಅಡವಿ ಸ್ವಾಮಿ ಬಂಧಿತರು. ಇನ್ನುಳಿದ ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ 1.65 ಲಕ್ಷ ರೂ. ಮೌಲ್ಯದ ನಾಲ್ಕು ಬೈಕ್, 85 ಸಾವಿರ ರೂ. ಮೌಲ್ಯದ ವಿವಿಧ ಕಬ್ಬಿಣದ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮರಿಯಮ್ಮನಹಳ್ಳಿ ಸಮೀಪದ ಎಂಎಸ್‌ಪಿಎಲ್ ಗಣಿ ವಲಯದ ಸ್ಟಾಕ್ ಯಾರ್ಡ್‌ನಲ್ಲಿ ಕಬ್ಬಿಣದ ಬಿಡಿ ಭಾಗಗಳನ್ನು ಕದ್ದು, ಹನುಮನಹಳ್ಳಿ ಗ್ರಾಮದ ಕಳ್ಳನೊಬ್ಬನ ಮನೆಯಲ್ಲಿ ಇಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದು ಪಿಎಸ್‌ಐ ಮೀನಾಕ್ಷಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಗಣಿ ವಲಯದಲ್ಲಿ ಬಿಡಿಭಾಗಗಳನ್ನು ಕದ್ದೊಯ್ಯುವ ವೇಳೆ ಸಾಮಗ್ರಿ ಸಮೇತ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಹನುಮಂತ ತಳವಾರ, ಪ್ರೊಬೇಷನರಿ ಪಿಎಸ್‌ಐ ನಾರಾಯಣ, ಎಎಸ್‌ಐಗಳಾದ ನಿರಂಜನ ಗೌಡ, ಮುರಾರಿ, ಸಿಬ್ಬಂದಿ ಹೆಗ್ಗಪ್ಪ, ತಿಪ್ಪೇಸ್ವಾಮಿ, ಸಿದ್ದೇಶ, ಪ್ರವೀಣ, ಕೊಟ್ರೇಶ ಅಂಗಡಿ, ಸಂಜೀವಕುಮಾರ, ಶಿವರಾಜ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net