ದೇಶದ ಅಭಿವೃದ್ಧಿಗೆ ಕೃಷಿಯಷ್ಟೇ ಕೈಗಾರೀಕರಣವೂ ಮುಖ್ಯ ಎಂದ ಬಿಎಂಎಂ ಕಂಪನಿಯ ನಿರ್ದೇಶಕ ವಿವಿವಿ.ರಾಜು ಅಭಿಪ್ರಾಯ

05032021 MM Halli BMM Company Safety Day
Published on

ಮರಿಯಮ್ಮನಹಳ್ಳಿ : ಕೃಷಿ ಜತೆಗೆ ಕೈಗಾರೀಕರಣ ಅಭಿವೃದ್ಧಿಯಾದರೆ ದೇಶದ ಆರ್ಥಿಕ ಹಾಗೂ ನಿರುದ್ಯೋಗ ಸಮಸ್ಯೆಯನ್ನೂ ನಿವಾರಿಸಬಹುದು ಎಂದು ಬಿಎಂಎಂ ಕಂಪನಿಯ ನಿರ್ದೇಶಕ ವಿವಿವಿ.ರಾಜು ಹೇಳಿದರು.

ಸಮೀಪದ ಬಿಎಂಎಂ ಕಂಪನಿಯಲ್ಲಿ ಶುಕ್ರವಾರ ಆಯೋಜಿಸಿದ್ದ 50ನೇ ರಾಷ್ಟ್ರೀಯ ಸುರಕ್ಷತಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಪ್ರಗತಿಗೆ ಕೃಷಿ ಎಷ್ಟು ಮುಖ್ಯವೋ ಕೈಗಾರಿಕೆ ಸಹ ಅಷ್ಟೆ ಮುಖ್ಯವಾಗಿದೆ. ಕೈಗಾರಿಕೆ ಪ್ರದೇಶದಲ್ಲಿ ಕಾರ್ಮಿಕರು ಹೆಚ್ಚು ಸುರಕ್ಷತೆಗೆ ಆದ್ಯತೆ ನೀಡಬೇಕು. ಇದರಿಂದ ಕೈಗಾರಿಕೆ ಹಾಗೂ ಕಾರ್ಮಿಕರಿಗೂ ಒಳಿತು. ಕೈಗಾರಿಕಾ ಸ್ಥಳದಲ್ಲಿ ಯಾವುದೇ ದುರ್ಘಟನೆ, ಅವಘಡ ಸಂಭವಿಸದಂತೆ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದೇ ಪ್ರತಿ ಕೈಗಾರಿಕೆಯ ಮೂಲ ಉದ್ದೇಶವಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್ ಸುರಕ್ಷತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಈ ಕೈಗಾರಿಕಾ ವಲಯಗಳಲ್ಲಿಯ ಕಾರ್ಮಿಕರ ಮತ್ತು ಉದ್ಯೋಗಿಗಳ ಹಿತದೃಷ್ಟಿಯಿಂದ ಸುರಕ್ಷತಾ, ರಾಸಾಯನಿಕ ದುರಂತ ನಿವಾರಣಾ ದಿನ ಸೇರಿ ಅನೇಕ ಮನರಂಜನೆ ಕಾರ್ಯಕ್ರಮಗಳನ್ನು ಜಾಗೃತಿಗಾಗಿ ಆಯೋಜನೆ ಮಾಡಲಾಗುತ್ತದೆ. ಎಲ್ಲಾ ಕಾರ್ಮಿಕರು, ಅಧಿಕಾರಿಗಳು ಜಾಗೃತಿ ಹಾಗೂ ಎಚ್ಚರಿಕೆಯಿಂದ ಕೈಗಾರಿಕೆ ವಲಯದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಅವಘಡಗಳನ್ನು ತಪ್ಪಿಸಬಹುದು ಎಂದರು.

ಎಸ್.ಎಂ.ಗೌರಿ ಪಾರ್ಥಿಸಿದರು. ಜಿ.ಮಾರುತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ವಂದಿಸಿದರು.

ಹಣಕಾಸು ಮುಖ್ಯಸ್ಥರಾದ ರಾಜೇಂದ್ರ ಮುಂದ್ರಾ, ಆಡಳಿತ ಅಧಿಕಾರಿ ಗಣೇಶ್ ಹೆಗಡೆ, ಮನೀಶ್ ಡಿ.ವರ್ಣೇಕರ್, ಮಾರುತಿ ಪ್ರಸಾದ್, ಡಾ.ಪಿ.ವಿಜಯ ವೆಂಕಟೇಶ್, ಮನೋಜ್ ಅಗರ್‌ವಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net