10ರಂದು ಮರಿಯಮ್ಮನಹಳ್ಳಿ ಬಂದ್; ಶಾಶ್ವತ ಕುಡಿವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಜಿ. ಪರಶುರಾಮ ಮಾಹಿತಿ

08102022 MM Halli news
Published on


ಮರಿಯಮ್ಮನಹಳ್ಳಿ, ಶಾಶ್ವತ ಕುಡಿವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಜಿ. ಪರಶುರಾಮ, ಬಂದ್,
Mariammanahalli, Permanent Drinking Water Struggle Committee President G. Parasurama, Bandh,

ಮರಿಯಮ್ಮನಹಳ್ಳಿ: ಶಾಶ್ವತ ಕುಡಿವ ನೀರು ಯೋಜನೆ ಜಾರಿಗೆ ಆಗ್ರಹಿಸಿ ಅ.10 ರಂದು ಪಟ್ಟಣ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ಕುಡಿವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಜಿ.ಪರಶುರಾಮ ತಿಳಿಸಿದರು.

ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಮರಿಯಮ್ಮನಹಳ್ಳಿ ಶಾಶ್ವತ ಕುಡಿವ ನೀರಿನ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ವಾಣಿಜ್ಯ ವ್ಯವಹಾರಗಳು, ವಾರದಸಂತೆ ಇರುವುದಿಲ್ಲ. ವರ್ತಕರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ವಾಣಿಜ್ಯ ಸಂಘ ಸಂಸ್ಥೆಗಳು ಸ್ವಯಂಕೃತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ಈ ಪ್ರತಿಭಟನೆಯನ್ನು ಪಕ್ಷಾತೀತವಾಗಿ ಮಾಡಲಾಗುತ್ತಿದ್ದು, ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯದರ್ಶಿ ಚಿದ್ರಿಸತೀಶ, ಎಸ್. ಕೃಷ್ಣಾನಾಯ್ಕ, ಎನ್. ಸತ್ಯನಾರಾಯಣ, ಗುಂಡಾ ಸ್ವಾಮಿ, ಗರಗ ಪ್ರಕಾಶ್, ಕೊಟಗಿ ಲೋಕೇಶ್, ಬಿ.ವಿಜಯಕುಮಾರ್, ಎನ್.ಎಸ್. ಬುಡೇನ್ ಸಾಬ್, ತಳವಾರ ಹುಲುಗಪ್ಪ, ಬಿ.ಎಂ.ಎಸ್. ಪ್ರಕಾಶ, ಕೆ.ರಘುವೀರ, ಉರುವಕೊಂಡ ವೆಂಕಟೇಶ, ಕೊಟ್ಗಿ ಮಾರುತೇಶ, ರೆಹಮಾನ್, ಶ್ರೀಕಾಂತ ನಾಯ್ಕ, ಪ್ರಕಾಶನಾಯ್ಕ, ಬುರುಡಿ ರಾಮಣ್ಣ, ತಳವಾರ ಸೋಮಶೇಖರ, ಕಟಗಿ ರವಿಕುಮಾರ, ಎಚ್. ಗೋಪಾಲ, ಎಲ್. ಸೂರ್ಯಪ್ರಕಾಶ, ತಳವಾರ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net