ಮೆಕ್ಕೆಜೋಳದ ಜಮೀನು ಜಲಾವೃತ

Mmhalli Rain
ಗುಂಡಾ ಗ್ರಾಮದಲ್ಲಿ ಮಳೆಯಿಂದ ಮೆಕ್ಕೆಜೋಳ ಬೆಳೆ ಜಲಾವೃತವಾಗಿರುವುದು.
Published on

ಮರಿಯಮ್ಮನಹಳ್ಳಿ: ಸಮೀಪದ ಗುಂಡಾ ಗ್ರಾಮದಲ್ಲಿ ಮಳೆಗೆ ಮೆಕ್ಕೆಜೋಳ ಬೆಳೆ ನೀರುಪಾಲಾಗಿದೆ.

ಬುಧವಾರ ಸುರಿದ ಧಾರಾಕಾರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಗ್ರಾಮದ ಹಿರೇಹಳ್ಳ ಒಡೆದು ಕೆ.ಬಸವರಾಜ ಸೇರಿ ಇತರ ರೈತರು ಮೆಕ್ಕೆಜೋಳ ಜಮೀನುಗಳು ಜಲಾವೃತಗೊಂಡಿವೆ.

ರಾಮನಮಲೈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಿಂದ ಹಳ್ಳಕೊಳ್ಳಗಳಲ್ಲಿ ಹೂಳು ತುಂಬಿದೆ. ಬೆಟ್ಟಗಳಿಂದ ಗಣಿತ್ಯಾಜ್ಯ ಹರಿದು ಬರುವ ಕೊಳ್ಳಗಳಿಗೆ ನೇರವಾಗಿ ಡಂಪ್ ಮಾಡುವುದರಿಂದ ಮಳೆನೀರು ಗಣಿ ತ್ಯಾಜ್ಯದ ಜತೆಗೆ ಜಮೀನುಗಳಿಗೆ ಹರಿಯುತ್ತಿದೆ.

ಇದರಿಂದ ಬೆಳೆ ಹಾಳಾಗುತ್ತಿದೆ. ಹಳ್ಳದ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಜಲಾವೃತಗೊಂಡಿದ್ದರೂ ಅಧಿಕಾರಿಗಳು ಭೇಟಿ ನೀಡಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಸಾಮಾನ್ಯವಾಗಿದ್ದು, ಸೂಕ್ತ ಪರಿಹಾರ ಒದಗಿಸುತ್ತಿಲ್ಲ ಎಂದು ರೈತರು ದೂರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net