ಉಜಿರೆ ಮಾರಿಗುಡಿಯಲ್ಲಿ ವಾರ್ಷಿಕ ಮಾರಿಪೂಜೆ

New Project (10)
Published on

ಬೆಳ್ತಂಗಡಿ: ಉಜಿರೆ ಶ್ರೀ ಮಹಮ್ಮಾಯಿ(ಮಾರಿಗುಡಿ) ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆ, ಗುಳಿಗ ದೈವದ ನೇಮೋತ್ಸವ ಹಾಗೂ ಗೊಂಬೆ ಕಳಿಸುವ ಕಾರ್ಯಕ್ರಮ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ನೇತೃತ್ವದಲ್ಲಿ ನಡೆಯಿತು.

ಪರಾರಿ ವೆಂಕಟ್ರಮಣ ಹೆಬ್ಬಾರ್, ಪ್ರಕಾಶ್ ಕುದ್ದಣ್ಣಾಯ, ಮೋಹನ ಶೆಟ್ಟಿಗಾರ್, ಮೋಹನ ಕುಮಾರ್, ಲಕ್ಷ್ಮಣ ಸಫಲ್ಯ, ಅರವಿಂದ ಭಾಗ್ವತ, ಭರತ್ ಕುಮಾರ್, ರಮೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶ್ರೀ ಮಹಮ್ಮಾಯಿ ಸೇವಾ ಸಮಿತಿ ಸದಸ್ಯರು, ಅರ್ಚಕರು, ಗ್ರಾಮಸ್ಥರು ಹಾಗೂ ವಾದ್ಯ ಮೇಳ ಭಾಗವಹಿಸಿದ್ದರು. ಶ್ರೀ ದೇವಿಗೆ ಮಹಾಪೂಜೆ ಬಳಿಕ ಗುಳಿಗ ದೈವದ ನರ್ತನ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net