

ಹುಬ್ಬಳ್ಳಿ : ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಕಚೇರಿಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪೌರಕಾರ್ವಿುಕರಿಂದ ಧ್ವಜಾರೋಹಣ ಮಾಡಿಸಲಾಯಿತು.
ಹಿರಿಯ ಮಹಿಳಾ ಪೌರಕಾರ್ವಿುಕಳಾದ ಮಾರೆವ್ವ ಸುರಪುರ ಅವರು ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ನಗರದ ಸ್ವಚ್ಛತೆ, ಆರೋಗ್ಯ ಕಾಪಾಡುವ ಕೆಲಸ ಮಾಡುವ ಪೌರಕಾರ್ವಿುಕರೇ ನಗರದ ಮುಖ್ಯ ಶಕ್ತಿ. ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೌರಕಾರ್ವಿುಕರ ಸೇವೆ ಸ್ಮರಣೀಯ. ಈ ದಿಸೆಯಲ್ಲಿ ಸ್ವಚ್ಛತೆಯ ಸೇನಾನಿಗಳಿಂದ ಧ್ವಜಾರೋಹಣ ಮಾಡಿ ವಿಶಿಷ್ಟವಾಗಿ ಆಚರಿಸಿರುವದು ಶ್ಲಾಘನೀಯ ಎಂದರು.
ಧ್ವಜಾರೋಹಣ ಮಾಡಿದ ಪೌರ ಕಾರ್ವಿುಕೆ ಮಾರೆವ್ವ ಸುರಪುರ ಮಾತನಾಡಿ, ಕೇಂದ್ರ ಸಚಿವರು ನಮ್ಮನ್ನು ಗುರುತಿಸಿ ಧ್ವಜಾರೋಃಣ ಮಾಡಲು ಅವಕಾಶ ಮಾಡಿಕೊಟ್ಟಿರುವ ಅವರ ಈ ನಡೆ ನಮ್ಮೆಲ್ಲರಿಗೂ ಜೀವನದಲ್ಲಿ ಸ್ಪೂರ್ತಿ ನೀಡಿದ ಕ್ಷಣ ಎಂದು ಭಾವಿಸುತ್ತೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುವ ಅವರ ಮನೋಭಾವ ನಿಜಕ್ಕೂ ಮೆಚ್ಚತಕ್ಕದ್ದು ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಬಿಜೆಪಿಯ ಗೋವಿಂದ ಜೋಶಿ, ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹಾಗೂ ಇತರರು ಉಪಸ್ಥಿತರಿದ್ದರು. 20 ಜನ ಪೌರಕಾರ್ವಿುಕರನ್ನು ಸನ್ಮಾನಿಸಲಾಯಿತು. ಕನಕದಾಸ ಕಾಲೇಜಿನ ಎನ್ಸಿಸಿ ಕೆಡೆಟ್ಗಳು ರಾಷ್ಟ್ರಧ್ವಜಕ್ಕೆ ಗೌರವ ಸರ್ಪಿಸಿದರು. ಕೇಂದ್ರ ಸಚಿವರ ಅಪರ ಆಪ್ತ ಕಾರ್ಯದರ್ಶಿಗಳಾದ ಮುರಲೀಧರ ಮಳಗಿ, ಮಲ್ಲಿಕಾರ್ಜುನಗೌಡ ಪಾಟೀಲ ಹಾಗೂ ಸಚಿವರ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.