ಮರ್ಧಾಳ ಚಂದ್ರನಾಥ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ

New Project (4)
Published on

ಕಡಬ: ಕಡಬ ತಾಲೂಕು ಮರ್ಧಾಳ ಶ್ರೀ ಚಂದ್ರನಾಥ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ಬೆಳಗ್ಗೆ ತೋರಣ ಮುಹೂರ್ತ ನಡೆದು, ವಿಮಾನ ಶುದ್ಧಿ, ಪಂಚಾಮೃತ ಅಭಿಷೇಕ, ಮುನಿಶ್ರೀ 108 ಶ್ರೀ ಆದಿತ್ಯಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಶಿಷ್ಯವೃಂದ ಹಾಗೂ ಭಕ್ತವೃಂದದವರಿಂದ ಡಾ.ಜಯಕೀರ್ತಿ ಅವರ ಮುಖಾಂತರ ದಾನವಾಗಿ ನೀಡಿದ 24 ಜನಬಿಂಬಗಳಿಗೆ ಕ್ಷೀರಾಭಿಷೇಕ ಮಾಡಲಾಯಿತು. ಶ್ರೀ ಚಂದ್ರನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಶ್ರೀ ಪದ್ಮಾವತಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಶ್ರೀ ದೇವರ ಉತ್ಸವ, ಪ್ರಸಾದ ವಿತರಣೆ, ಚರ್ತುವಿಂಶತಿ ತೀರ್ಥಂಕರರ ಆರಾಧನೆ ಮತ್ತು ಸ್ಥಾಪನೆ, ತೋರಣ ವಿಸರ್ಜನೆ ಸಂಜೆ ದೀಪಿಕಾ ಮತ್ತು ರವೀಂದ್ರ ಆರಿಗ ಅವರಿಂದ ಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನ ಪೂಜೆ, ಕಲ್ಲುರ್ಟಿ ದೈವಕ್ಕೆ ತಂಬಿಲ ಸೇವೆ, ನೇಮೋತ್ಸವ ನಡೆಯಿತು.

ಮರ್ಧಾಳ ಬೀಡು ಮೊಕ್ತೇಸರ ಕೆ.ಚಂದ್ರನಾಥ ಆರಿಗ, ಬಸದಿಯ ಉತ್ಸವ ಸಮಿತಿ ಅಧ್ಯಕ್ಷ ಸೀಮಂದರ ಆರಿಗ, ಗೌರವಾಧ್ಯಕ್ಷೆ ಶಾರದಾ ಜಯಕುಮಾರ್, ಉಪಾಧ್ಯಕ್ಷ ಪ್ರಮೋದ್ ಕುಮಾರ್ ಜೈನ್ ಬೆದ್ರಾಜೆ ಶಾಂತಿನಿಕೇತನ, ಕಾರ್ಯದರ್ಶಿ ಪ್ರದೀಪ್ ಜೈನ್ ಮಾಲೇಶ್ವರ, ಜತೆ ಕಾರ್ಯದರ್ಶಿ ಬಿ.ಧರಣೇಂದ್ರ ಜೈನ್ ಬೆದ್ರಾಜೆ ಗುತ್ತು, ಕೋಶಾಧಿಕಾರಿ ಯುವರಾಜ್ ಜೈನ್ ಮರೆಂಗೋಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net