

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠಕ್ಕೆ ಶ್ರಾವಣ ಮಾಸದ ಅಂಗವಾಗಿ ಬುಧವಾರ ಭೇಟಿ ನೀಡಿದ ಎಪಿಎಂಸಿ ಆಹಾರ ಧಾನ್ಯ ವರ್ತಕರ ಸಂದ ಪದಾಧಿಕಾರಿಗಳು ಕರ್ತೃ ಶ್ರೀ ಗುರುಸಿದ್ದೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ, ಕಾರ್ಯದರ್ಶಿ ಅರ್ಜುನ ಅಗರವಾಲ್, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಅಮಿತ ಮಹಾಜನ, ಇತರರು ಇದ್ದರು.