ವ್ಯಾಪಾರಸ್ಥರ ಸಂಘಕ್ಕೆ ರಾಜಕಿರಣ ಪುನರಾಯ್ಕೆ,  ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ

IMG_20250927_195517_906.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪಾರಸ್ಥರ ಸಂಘದ ನೂತನ ಪದಾಧಿಕಾರಿಗಳನ್ನು ಶುಕ್ರವಾರ ನಡೆದ ವಾರ್ಷಿಕ ಸಭೆಯಲ್ಲಿ ಸಲಹಾ ಸಮಿತಿ ಸೂಚನೆಯಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಜಕಿರಣ ಬಿ. ಮೆಣಸಿನಕಾಯಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಅಶೋಕ ಬಾಳಿಕಾಯಿ ಇವರು ಪುನರಾಯ್ಕೆಯಾದರು.
ಶ್ರೀನಿವಾಸ ಸೋಳಂಕಿ ಉಪಾಧ್ಯಕ್ಷ, ಚಂದ್ರಶೇಖರ ಪೂಜಾರ ಸಹಗೌರವ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಸಂಘದ ಸಲಹಾ ಸಮಿತಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ಸದಸ್ಯರಾದ ಎ.ಆರ್. ನದಾಫ, ಜಿ.ಆರ್. ಬೆಲ್ಲದ, ರಾಜಶೇಖರ ಬತ್ಲಿ, ರಾಜಶೇಖರ ವಾಲಿ, ಗಂಗನಗೌಡ ಪಾಟೀಲ, ಬಸವರಾಜ ಯಕಲಾಸಪುರ, ಎಂ.ಆರ್. ಮೇಲಗಿರಿ, ಪ್ರಭು ಅಣ್ಣೆಪ್ಪನವರ, ಅನೀಲ ಓಸ್ತವಾಲ, ರವಿ ಮರದ, ಈಶ್ವರಪ್ಪ ಹೆಬಸೂರ, ಶಿವನಗೌಡ ಪಾಟೀಲ, ವಿ.ಎನ್. ಭಂಡಾರಕರ, ಬಸವಂತಪ್ಪ ಪೂಜಾರ, ರಮೇಶ ಕುರವಾ, ಸುರೇಶ ಓಸ್ತವಾಲ, ಎಸ್.ಬಿ. ಮೆಣಸಿನಕಾಯಿ, ಜಿ.ಎಸ್. ಛಬ್ಬಿ, ಗುಂಡಪ್ಪ ಸಾವುಕಾರ, ಶಿವಯೋಗಿ ಹೊಸಕಟ್ಟಿ, ಮೋಹನ ಸೋಳಂಕಿ, ನಾರಾಯಣ ಭಂಡಾರಕರ, ಪ್ರಮೋದ ಸೋಳಂಕಿ, ಮುಂತಾದವರು ಉಪಸ್ಥಿತರಿದ್ದರು.

ರಾಜಕಿರಣ ಮೆಣಸಿನಕಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ 2024-25ನೇ ಸಾಲಿನ ಆಯ-ವ್ಯಯ ಹಾಗೂ ಅಢಾವೆ ಪತ್ರಿಕೆಯನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ನಂತರ ಸಲಹಾ ಸಮಿತಿಯ ನಿರ್ಣಯದಂತೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net