ಮಾ.6ರಂದು ಬೆಳ್ಳಿ ತೆರೆಗೆ ಬರಲಿದೆ ಹೊಸಬರ ರಾಂಗ್ ಟರ್ನ್ ಸಿನಿಮಾ

030320 Wrong Turn Cinema Pressmeet
Published on

ಹಗರಿಬೊಮ್ಮನಹಳ್ಳಿ: ಮಾ.6 ರಂದು ರಾಜ್ಯಾದ್ಯಂತ ರಾಂಗ್ ಟರ್ನ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸ್ಥಳೀಯರಾದ ಚಿತ್ರದ ನಿರ್ದೇಶಕ ಡಿ.ಕೆ.ಆನಂದ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಂಗ್ ಟರ್ನ್ ಹಾರರ್ ಸಿನಿಮಾವಾಗಿದೆ. ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನದ ಹೊಣೆ ಹೊತ್ತಿದ್ದೇನೆ.ಸುಭಾಷಿಣಿ ಹರಿಕೃಷ್ಣನ್ , ಗೀತಾಗೌಡ ಬಂಡವಾಳ ಹೂಡಿದ್ದಾರೆ. ಸುರೇಶ್ ಸಾಹಿತ್ಯ ಜತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಮೂವರು ನಾಯಕರು, ನಾಯಕಿಯರಿದ್ದು, ಹೊಸಪ್ರತಿಭೆಗಳಾದ ಉದಯ್, ರವಿಸಾಗರ್, ವಿವಾನ್ ಅಕ್ಷಯ್ ಹಾಗೂ ಸಂಧ್ಯಾಗೌಡ, ಶಕುಂತಲಾ, ಖುಷಿ ನಟಿಸಿದ್ದಾರೆ. ಚಿತ್ರದಲ್ಲಿ ಉಕ್ಕಡಗಾತ್ರಿ ಅಜ್ಜಯ್ಯ ಪವಾಡವೂ ಬಳಸಿಕೊಳ್ಳಲಾಗಿದೆ ಎಂದರು.

ಹಗರಿಬೊಮ್ಮನಹಳ್ಳಿ, ಹಡಗಲಿ, ಮದಗಲಟ್ಟ ಅರಣ್ಯ ಪ್ರದೇಶ, ದಾವಣಗೆರೆ, ಬೆಂಗಳೂರು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಂಗಳೂರಿನ ಹೊನ್ನಾವರದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ರಾಜ್ಯದ ಮಲ್ಟಿಫ್ಲೆಕ್ಸ್ ಒಳಗೊಂಡಂತೆ 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಸ್ವೀಕರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಸಹೋದರ ಡಿ.ಕೆ.ಚಂದ್ರು ಮಾತನಾಡಿ ಡಿ.ಕೆ.ಆನಂದ್, ಟಿ.ಎಸ್.ನಾಗಭರಣ ನಿರ್ದೇಶನದ ವಸುಂಧರ ಸಿನಿಮಾ ಮತ್ತು ಧಾರವಾಹಿಗಳಾದ ರಾಘವೇಂದ್ರ ಮಹಿಮೆ, ಅರುಂಧತಿಯಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು. ಗೆಳೆಯರಾದ ವಿನಾಯಕ, ಕೊಟ್ರೇಶ್ ತಳವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net