

ಉಡುಪಿ: ಜಿಲ್ಲೆಯೂ ಹಸಿರುವ ವಲಯದತ್ತ ದಾಪುಗಾಲಿಡುತ್ತಿದೆ ಎಂಬ ಖುಷಿ ಒಂದೆಡೆಯಾದರೆ ಬೇರೆ ಜಿಲ್ಲೆಯ ಕರೊನಾ ಸೋಂಕಿತ ವ್ಯಕ್ತಿ ಉಡುಪಿ ಜಿಲ್ಲೆಯ ಸಂಪರ್ಕಕ್ಕೆ ಬಂದಿರುವುದು ಆತಂಕ ಮೂಡಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಪತ್ತೆಯಾದ ಕರೊನಾ ಸೋಂಕಿತ ವ್ಯಕ್ತಿಗೆ ಉಡುಪಿ ಜಿಲ್ಲೆಯಸಂಪರ್ಕ ಇರುವುದಾಗಿ ಟ್ರಾವೆಲ್ ಹಿಸ್ಟರಿಯಲ್ಲಿ ಬಹಿರಂಗವಾಗಿದೆ. ಸೋಂಕಿತ ವ್ಯಕ್ತಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವನು. ಈತ ಏಪ್ರಿಲ್ 22ರಂದು ನಾಗಮಂಗಲಕ್ಕೆ ಆಗಮಿಸಿದ್ದು, ಏ.24 ರಂದು ಪರೀಕ್ಷೆ ಮಾಡಲಾಗಿದೆ.
ಸೋಮವಾರ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ. ಮುಂಬೈ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈ ವ್ಯಕ್ತಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಟ್ರಕ್ ಒಂದರಲ್ಲಿ ರಾಜ್ಯಕ್ಕೆ ಪ್ರವೇಶಿಸಿದ್ದಾನೆ. ಈ ಟ್ರಕ್ ಏಪ್ರಿಲ್ 20ರಂದು ಕುಂದಾಪುರ ತಾಲೂಕಿನ ಸಾಸ್ತಾನ ಹಾಗೂ ತ್ರಾಸಿ ಮಧ್ಯೆ ಪೆಟ್ರೋಲ್ ಬಂಕ್‌ವೊಂದರಲ್ಲಿ ನಿಲ್ಲಿಸಲಾಗಿತ್ತು. ವ್ಯಕ್ತಿಯೂ ಪೆಟ್ರೋಲ್ ಬಂಕ್‌ನಲ್ಲಿ ಊಟ ಮಾಡಿ, ಸ್ನಾನ ಮಾಡಿದ್ದ ಎನ್ನಲಾಗಿದೆ.
ಈ ಟ್ರಾವೆಲ್ ಹಿಸ್ಟರಿ ಮಾಹಿತಿಯನ್ನು ಮಂಡ್ಯ ಜಿಲ್ಲಾಡಳಿತ, ಮಾಹಿತಿ ಬರುತ್ತಿದ್ದಂತೆ ಎಚ್ಚೆತ್ತ ಉಡುಪಿ ಜಿಲ್ಲಾಡಳಿತ ಪೆಟ್ರೋಲ್ ಬಂಕ್ ಪತ್ತೆ ಮಾಡಿ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲು ಕ್ರಮ ತೆಗೆದುಕೊಂಡಿದೆ. ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಬಂಕ್ ಪತ್ತೆ ಕಾರೈದಲ್ಲಿ ತೊಡಗಿದ್ದಾರೆ. ಬಂಕ್ ಕೆಲಸಗಾರರು ಯಾರ‌್ಯಾರ ಸಂಪರ್ಕಕ್ಕೆ ಬಂದಿದ್ದರು, ಕುಟುಂಬದವರೆ ಜತೆಗಿದ್ದರೆ? ಪ್ರತ್ಯೇಕ ವಾಸ ಇದ್ದರೆ? ಮೊದಲಾದ ವಿಚಾರಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಜಯವಾಣಿಗೆ ತಿಳಿಸಿದ್ದಾರೆ.