ಮರಾಟಿ ಸಮಾಜ ಸೇವಾ ಸಂಘ ಉಚಿತ ವೈದ್ಯಕೀಯ ಶಿಬಿರ

mng-22 sep Marati samaja
Published on


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ವಿಟ್ಲ ಪದವಿಪೂರ್ವ ಕಾಲೇಜು ವಠಾರದಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರ ಭಾನುವಾರ ನಡೆಯಿತು.


ನ್ಯೂ ಇಂಡಿಯಾ ಇನ್ಸೂರೆನ್ಸ್‌ನ ವಿಭಾಗೀಯ ಪ್ರಬಂಧಕಿ ವೇದಾವತಿ ಎನ್. ಶಿಬಿರ ಉದ್ಘಾಟಿಸಿದರು. ವಿಟ್ಲ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಉಪಪ್ರಾಂಶುಪಾಲ ಕಿರಣ್ ಕುಮಾರ್, ಮಹಮ್ಮಾಯಿ ಮರಾಟಿ ಮಂದಿರ ನೆಕ್ಕರೆಕಾಡು ಇದರ ಅಧ್ಯಕ್ಷ ಕೃಷ್ಣ ನಾಯ್ಕ ಶುಭ ಹಾರೈಸಿದರು. ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಅಧ್ಯಕ್ಷ ಶ್ರೀನಿವಾಸ ನಾಯ್ಕ ಪಡೀಲ್ ಅಧ್ಯಕ್ಷತೆ ವಹಿಸಿದ್ದರು.


ಶಿಬಿರದಲ್ಲಿ ಸಾಮಾನ್ಯ ರೋಗ, ಸ್ತ್ರೀ ರೋಗ, ಕಣ್ಣಿನ ತಜ್ಞರು, ಮಕ್ಕಳ ತಜ್ಞರು ಪಾಲ್ಗೊಂಡಿದ್ದರು. ಸಂಘದ ಮೂಲಕ 40 ಮಂದಿಗೆ ಕನ್ನಡಕ ವಿತರಿಸಲು ನಿರ್ಧರಿಸಲಾಯಿತು. 175 ಮಂದಿ ಶಿಬಿರದ ಪ್ರಯೋಜನ ಪಡೆದರು.
ಮಹಾಲಿಂಗ ನಾಯ್ಕ ಸ್ವಾಗತಿಸಿದರು. ಮಹಾಲಿಂಗ ನಾಯ್ಕ ಗುರುಪುರ ವಂದಿಸಿದರು. ಶ್ರೀ ಮಹಮ್ಮಾಯಿ ಮರಾಟಿ ಮಂದಿರ ನೆಕ್ಕರೆಕಾಡು ವಿಟ್ಲ ಹಾಗೂ ಮರಾಟಿ ಯುವ ವೇದಿಕೆ ವಿಟ್ಲ ಇವರು ಸಹಕಾರ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net