ಬೆಳ್ಳಂಬೆಳಗ್ಗೆ ಮ್ಯಾರಥಾನ್ ಸಪ್ಪಳ

Marathon Sappala in the early morning
Published on

ಮಡಿಕೇರಿ:

ಹಗುರವಾಗಿ ಹರಡಿದಂತೆ ಕಂಡುಬರುತ್ತಿದ ಮಂಜಿನ ವಾತಾವರಣ, ಚುಮು ಚುಮು ಚಳಿಯ ಮಧ್ಯೆ ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳ್ಳಂಬೆಳಗ್ಗೆ ಯುವ ಜನತೆಯ ಕಲರವ ಕೇಳಿಬರುತ್ತಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಯುವಕ-ಯುವತಿಯರು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಸೇರಿದ್ದರು. ಇವರ ಜತೆಗೆ ಆಗಮಿಸಿದ್ದ ಪೋಷಕರು, ಪಾಲಕರಲ್ಲೂ ಇದೇ ರೀತಿಯ ಉತ್ಸಾಹ ಮನೆ ಮಾಡಿತ್ತು.

ಸೇನೆಗೆ ಸೇರುವ ಆಸಕ್ತಿ ಇರುವ ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ಕ್ರೀಡಾಪಟುಗಳ ಪ್ರತಿಭೆ ಬೆಳಕಿಗೆ ತರುವು ಉದ್ದೇಶದಿಂದ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಭಾನುವಾರ (ನ.೧೯) ಕುಶಾಲನಗರದಲ್ಲಿ ನಡೆದ ಗುಡ್ಡಗಾಡು ಓಟ ಸ್ಪರ್ಧೆ ಕ್ರೀಡಾಸಕ್ತರನ್ನು ವಿಶೇಷವಾಗಿ ಆಕರ್ಷಿಸಿತು. ೨೦೦೩ ಜೂನ್ ೧ರ ನಂತರ ಜನಿಸಿರುವವರಿಗಾಗಿ ನಡೆದ ಈ ಮ್ಯಾರಾಥಾನ್‌ನಲ್ಲಿ ಮಕ್ಕಳು ಸೇರಿದಂತೆ ೭೨ ಯುವಕರು, ೪೭ ಯುವತಿಯರು ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು.

ಹುಡುಗರಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ಸ್ಪರ್ಧೆ ೭.೫ ಕಿಮೀ ಕ್ರಮಿಸಿ ಇದೇ ಮೈದಾನದಲ್ಲಿ ಅಂತ್ಯವಾಯಿತು. ಹುಡುಗಿಯರಿಗೆ ಚೈತ್ರಾ ಲೇಔಟ್‌ನಿಂದ ಆರಂಭವಾದ ಸ್ಪರ್ಧೆ ೪.೫ ಕಿಮೀ ದೂರ ಕ್ರಮಿಸಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತ್ಯವಾಯಿತು. ಅಂತಾರಾಷ್ಟಿçÃಯ ಗುಡ್ಡಗಾಡು ಓಟಗಾರ ಹೊಸೋಕ್ಲು ಚಿಣ್ಣಪ್ಪ ಮಾರ್ಗದರ್ಶನದಲ್ಲಿ ಅಂತಾರಾಷ್ಟಿçÃಯ ಮಾನದಂಡಕ್ಕೆ ಅನುಗುಣವಾಗಿ ನಡೆದ ಸ್ಪರ್ಧೆಗಾಗಿ ಏರು, ತಗ್ಗು, ಸಮತಟ್ಟು, ಉತ್ತಮ ಮತ್ತು ಕೆಟ್ಟ ರಸ್ತೆಗಳನ್ನು ಒಳಗೊಂಡ ಮಾರ್ಗವನ್ನು ಗುರುತಿಸಲಾಗಿತ್ತು.

ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ೨ನೇ ವರ್ಷದ ಈ ಗುಡ್ಡಗಾಡು ಓಟದ ಸ್ಪರ್ಧೆಗೆ ಕುಶಾಲನಗರ ವ್ಯಾಪ್ತಿಯಲ್ಲಿ ನೆಲೆಸಿರುವ ಮಾಜಿ ಸೈನಿಕರು ಸಂಪೂರ್ಣ ಸಹಕಾರ ನೀಡಿದ್ದರು. ಮಾರ್ಗದುದ್ದಕ್ಕೂ ನಿರ್ಮಿಸಿದ್ದ ಚೆಕ್ ಪಾಯಿಂಟ್, ಸಹಾಯ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿ ಓಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಮ್ಯಾರಾಥಾನ್ ಯಶಸ್ಸಿಗೆ ಸಹಕರಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿಯವಯ್ಯ ನೇತೃತ್ವದಲ್ಲಿ ಈ ಭಾಗದ ದೈಹಿಕ ಶಿಕ್ಷಣ ಶಿಕ್ಷಕರೂ ಕ್ರೀಡಾಕೂಟಕ್ಕೆ ಅಗತ್ಯ ನೆರವು ನೀಡಿದರು.

ಆರಂಭದ ವರ್ಷ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇದ್ದು, ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಈ ಬಾರಿ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ ರಾಜ್ಯದ ವಿವಿಧ ಭಾಗಗಳಿಂದಲೂ ಓಟಗಾರರು ಪಾಲ್ಗೊಂಡಿದ್ದು, ಈ ಸ್ಪರ್ಧೆಯ ಜನಪ್ರಿಯತೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಮ್ಯಾರಾಥಾನ್ ಆಯೋಜನೆಗೆ ಸಂಘಟಕರು ನಿರ್ಧರಿಸಿದ್ದು, ಈಗಿನ ಲೋಪ, ದೋಷಗಳನ್ನು ಗುರುತಿಸಿಕೊಂಡು ಮತ್ತಷ್ಟು ಸುಧಾರಣೆಗಳೊಂದಿಗೆ ಸ್ಪರ್ಧೆ ನಡೆಸುವ ಚಿಂತನೆ ಹಂಚಿಕೊAಡರು.

ಬಾಲಕಿಯರ ವಿಭಾಗದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸುವಲ್ಲಿ ಗೊಂದಲ ಉಂಟಾಗಿತ್ತು. ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಮೈದಾನ ಪ್ರವೇಶಿಸಿ ಅಂತಿಮ ಗೆರೆಯನ್ನು ದಾಟುವ ಸಂದರ್ಭ ಗುರುತಿಸುವಲ್ಲಿ ಈ ಜವಾಬ್ದಾರಿ ಹೊತ್ತವರು ವಿಫಲರಾಗಿದ್ದು ಗೊಂದಲಕ್ಕೆ ಕಾರಣವಾಯಿತು. ಮೂರನೇ ಸ್ಥಾನ ಬಂದಿದ್ದ ಸ್ಪರ್ಧಿ ತನ್ನ ೩ನೇ ಸ್ಥಾನದ ಟೋಕನ್ ಹೊಂದಿಕೊಳ್ಳದೆ ಬದಿಗೆ ಬಂದಿದ್ದು ಕೂಡ ಆಕೆಗೆ ಮುಳುವಾಯಿತು. ಕೊನೆಗೆ ನಾಲ್ಕನೇ ಸ್ಥಾನದ ಬಹುಮಾನವನ್ನು ಇಬ್ಬರಿಗೆ ಹಂಚಲು ಸಂಘಟಕರು ನಿರ್ಧರಿಸಿದರು. ಸ್ಪರ್ಧಿಗಳನ್ನು ಕರೆತಂದಿದ್ದವರ ಜತೆಗೆ ಸಂಘಟಕರಲ್ಲದ ಕೆಲವರ ವರ್ತನೆಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಇಂಥವರ ನಡೆಯಿಂದ ಸಂಘಟಕರಿಗೆ ಕೆಟ್ಟ ಹೆಸರು ಬರುತ್ತದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ನಾನು ರಾಷ್ಟç ಮತ್ತು ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದೇನೆ. ಕುಶಾಲನಗರದ ಸ್ಪರ್ಧೆ ವಿಭಿನ್ನ ಅನುಭವ ಕೊಟ್ಟಿದೆ. ಇಲ್ಲಿಯ ಮಾರ್ಗ ತುಂಬಾ ಚೆನ್ನಾಗಿತ್ತು. ಸಂಘಟಕರು ಉತ್ತಮವಾಗಿ ವ್ಯವಸ್ಥೆ ಮಾಡಿದ್ದರು. ಇಂಥ ಸ್ಪರ್ಧೆಗಳು ಹೆಚ್ಚು ನಡೆದರೆ ಗ್ರಾಮೀಣ ಪ್ರತಿಭೆಗಳಿಗೆ ಅವರ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದಂತಾಗುತ್ತದೆ. ಮುಂದೆಯೂ ಈ ರೀತಿಯ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸುತ್ತೇನೆ.
ರಾಹುಲ್, ಮೈಸೂರು, ಬಾಲಕರ ವಿಭಾಗದ ಪ್ರಥಮ ಬಹುಮಾನ ವಿಜೇತ

ಕಳೆದ ಬಾರಿಯೂ ಈ ಸ್ಫರ್ಧೆಯಲ್ಲಿ ನಾನು ಪ್ರಥಮ ಬಹುಮಾನ ಪಡೆದಿದ್ದೆ. ಈ ವರ್ಷ ಕೂಡ ನನಗೇ ಪ್ರಥಮ ಬಹುಮಾನ ಬಂದಿದ್ದು ಖುಷಿ ತಂದಿದೆ. ನಿರಂತರ ಅಭ್ಯಾಸ ಇದ್ದರೆ ಇದೇನೂ ಕಷ್ಟವಲ್ಲ. ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಇದಕ್ಕೆ ಪೂರಕವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯಿAದಲೂ ಪ್ರೋತ್ಸಾಹ ಸಿಗುತ್ತಿದೆ.
ಚೈತ್ರಾ ಟಿ.ಪಿ., ಮೂಡಬಿದಿರೆ, ಬಾಲಕಿಯರÀ ವಿಭಾಗದ ಪ್ರಥಮ ಬಹುಮಾನ ವಿಜೇತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net