

ಮಡಿಕೇರಿ: ಅಬುದಾಬಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಯುವ ಪ್ರತಿಭೆ ರಿಮ್ಸಾ ನಫೀಸ ಕುಪ್ಪೆಂದಾರೆ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಗಲ್ಫ್ ಮಲ್ಟಿ ಸ್ಪೋರ್ಟ್ಸ್ ಇತ್ತೀಚೆಗೆ ಅಬುದಾಬಿಯ ರಾಜಧಾನಿಯಲ್ಲಿ ಸತತ ಮೂರು ೫ ಕಿಮೀ ಮ್ಯಾರಥಾನ್ ಸ್ಪರ್ಧೆಗಳನ್ನು ಆಯೋಜಿಸಿತ್ತು. ವಿವಿಧ ರಾಷ್ಟ್ರಗಳ ೨೫೦ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಒಟ್ಟುಗೂಡಿಸಿತ್ತು. ಉದಯೋನ್ಮುಖ ತಾರೆಗಳಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಯುವ ಪ್ರತಿಭೆ ಭಾರತದ ರಿಮ್ಸಾ ನಫೀಸ ಕುಪ್ಪೆಂದಾರೆ ಕೂಡ ಒಬ್ಬರು, ಅವರು ೧೫ ವರ್ಷದೊಳಗಿನ ಮಹಿಳಾ ವಿಭಾಗದಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು.
ರನ್ ಬಿಯಾಂಡ್ ದಿ ಸನ್ಸೆಟ್ ಸ್ಪರ್ಧೆಯಲ್ಲಿ ಡಯಾನಾ ಇಬೆಜಿಯಾಕೊ(ಕೆನಡಾ) ಪ್ರಥಮ ಸ್ಥಾನ ಪಡೆದರೆ, ರಿಮ್ಸಾ ನಫೀಸ(ಭಾರತ) ದ್ವಿತೀಯ ಸ್ಥಾನ ಪಡೆದರು. ಫಾರ್ಮುಲಾ ರನ್ ರೇಸ್ ಸ್ಪರ್ಧೆಯಲ್ಲಿ ಅನಾ ಸ್ಟೀನ್(ಬ್ರೆಜಿಲ್) ಪ್ರಥಮ ಸ್ಥಾನ ಪಡೆದರೆ, ರಿಮ್ಸಾ ನಫೀಸ(ಭಾರತ) ದ್ವಿತೀಯ ಸ್ಥಾನ ಪಡೆದರು. ರೀಮ್ ಮಾಲ್ ರನ್ ಸ್ಪರ್ಧೆಯಲ್ಲಿ ನಿಕಾ ಸ್ವಾಗುಸಾ(ಕ್ರೊಯೇಷಿಯಾ) ಪ್ರಥಮ ಸ್ಥಾನ ಪಡೆದರೆ, ಕ್ವಿನ್ ಬ್ರೌನ್(ಐರ್ಲೆಂಡ್) ದ್ವಿತೀಯ ಸ್ಥಾನ ಮತ್ತು ರಿಮ್ಸಾ ನಫೀಸ(ಭಾರತ) ತೃತೀಯ ಸ್ಥಾನ ಪಡೆದರು.
ರಿಮ್ಸಾ ನಫೀಸ ಪ್ರಸ್ತುತ ಅಕ್ವಾ ನೇಷನ್ ದುಬೈನಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ. ಅವರ ಪೋಷಕರಾದ ಮಡಿಕೇರಿ ನಗರದ ಕುಪ್ಪೆಂದಾರೆ ಸುಲೇಮಾನ್ ಮತ್ತು ಜುಲ್ಫಿಯಾ ನಜೀರ್ ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಪರ್ಧಾತ್ಮಕ ಮ್ಯಾರಥಾನ್ ಓಟದಲ್ಲಿ ತೊಡಗಿದ್ದಾರೆ.