

ರಬಕವಿ/ಬನಹಟ್ಟಿ: ಮ್ಯಾರಾಥಾನ್ ಉತ್ತಮ ಆರೋಗ್ಯದ ಗುಟ್ಟಾಗಿದೆ ಎಂದು ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಕಾಲೇಜ್ ಪ್ರಾಚಾರ್ಯ ಬಸವರಾಜ ಕೊಣ್ಣೂರ ಹೇಳಿದರು.
ಬನಹಟ್ಟಿಯಲ್ಲಿ ತಮ್ಮ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮ್ಯಾರಾಥಾನ್‌ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ವರ್ಷ ಸಹಬಾಳ್ವೆಯ ಧ್ಯೇಯ ಇಟ್ಟುಕೊಂಡು ಮ್ಯಾರಾಥಾನ್ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಶರೀರ ಉತ್ತಮವಾಗಿದ್ದರೆ ಮನಸ್ಸು ಶುದ್ಧವಾಗಿ ಆ ವ್ಯಕ್ತಿ ಯಾವ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುತ್ತಾನೋ ಆ ಕ್ಷೇತ್ರ ಅಭಿವದ್ಧಿಯಾಗಲು ಸಾಧ್ಯ. ಆಹಾರ ಪದ್ಧತಿ ಸರಿ ಇರಬೇಕು. ಅಂದಾಗ ಮಾತ್ರ ಜೀವನ ಪದ್ಧತಿ ಸರಿಯಾಗಿರುತ್ತದೆ ಎಂದು ಸಲಹೆ ನೀಡಿದರು.
ಹಿರಿಯರಾದ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಪೂಜಾರಿ, ಚಂದ್ರಶೇಖರ ಬಾಗೇವಾಡಿ, ರಾಜು ಜಾಲಿಗಿಡದ, ವಸಂತರಾವ ಹಜಾರೆ, ನಿಖಿಲ್ ಕೊಣ್ಣೂರ, ಕೀರಪ್ಪ ತಳವಾರ, ಶ್ರೀಶೈಲ ಉಳ್ಳಾಗಡ್ಡಿ, ಶ್ರೀನಿವಾಸ ಭಟ್ಟಡ, ಮುರಳಿ ಕಾಬ್ರಾ, ಎಸ್. ಎಸ್. ಹುಲಿ, ಚಂದ್ರು ಕುಲಗೋಡ, ವೆಂಕಟೇಶ ನಿಂಗಸಾನಿ, ರಾಜೇಶ ನೋಟದ ಭಾಗವಹಿಸಿದ್ದರು.