ಮೈಸೂರಿನಲ್ಲಿ ಪುರುಷರು, ಮಹಿಳೆಯರಿಗೆ ಮ್ಯಾರಥಾನ್

Published on

ಮೈಸೂರು: ಟೋಸ್ಟ್ ಮಾಸ್ಟರ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಅ.27ರಂದು ನಗರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ.

ಎಸ್‌ಜೆಸಿಇ ಕ್ಯಾಂಪಸ್‌ನಿಂದ ಅಂದು ಬೆಳಗ್ಗೆ 6 ಗಂಟೆಗೆ ಆರಂಭಗೊಳ್ಳುವ ಮ್ಯಾರಥಾನ್ ಮಹಿಳೆಯರು ಹಾಗೂ ಪುರುಷರಿಗಾಗಿ ಮೂರು, ಏಳು ಕಿಲೋಮೀಟರ್ ಅಂತರದ ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಎಲ್.ಶ್ರೀಹರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಗ್ಯ, ಸೌಹಾರ್ದತೆ, ವೈಯಕ್ತಿಕ ಸಾಧನೆ, ಸಮುದಾಯ ಮನೋಭಾವ, ನೆಟ್‌ವರ್ಕಿಂಗ್ ಅವಕಾಶಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಸಂಸ್ಥೆ ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅಭಿವೃದ್ಧಿಗೆ ಸೂಕ್ತ ತರಬೇತಿ, ಅವಕಾಶ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವರಿಗೆ ಶುಲ್ಕ ಇದ್ದು, ಮಾಹಿತಿಗೆ 9483477887 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ವಿಶೋಕ್, ಸೈ ಜೋಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net