ಮ್ಯಾರಾಥಾನ್‌ನಲ್ಲಿ ಬಸವಲಿಂಗಮ್ಮಪ್ರಥಮ ಸ್ಥಾನ

16 KNK 01
ಕೊಪ್ಪಳದಲ್ಲಿ ಆಯೋಜಿಸಿದ್ದ ಗವಿಶ್ರೀ ಕ್ರೀಡಾ ಉತ್ಸವದಲ್ಲಿ ಪ್ರಥಮ ಬಹುಮಾನ ಪಡೆದ ಕನಕಗಿರಿ ತಾಲೂಕಿನ ನಾಗಲಾಪುರದ ಬಸವಲಿಂಗಮ್ಮ ಅವರಿಗೆ 20 ಸಾವಿರ ರೂ.ಪುರಸ್ಕಾರ ಹಾಗೂ ಪಾರಿತೋಷಕವನ್ನು ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿತರಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಇದ್ದರು.
Published on

ಕನಕಗಿರಿ: ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಗವಿಶ್ರೀ ಕ್ರೀಡಾ ಉತ್ಸವದ ಮ್ಯಾರಥಾನ್‌ನಲ್ಲಿ ತಾಲೂಕಿನ ನಾಗಲಾಪುರ ಗ್ರಾಮದ ವಿದ್ಯಾರ್ಥಿನಿ ಬಸವಲಿಂಗಮ್ಮ ಪ್ರಥಮ ಬಹುಮಾನ ಪಡೆದುಕೊಂಡಿದ್ದಾಳೆ. ಹೊಸಪೇಟೆಯ ಬೈಪಾಸ್ ರಸ್ತೆಯಿಂದ ಆರಂಭವಾದ 12 ಕಿ.ಮೀ ಮ್ಯಾರಾಥಾನ್ ಆರ್‌ಟಿಒ ಆಫೀಸ್ ಮೂಲಕ ಸಾಗಿ ಗವಿಮಠದವರೆಗೂ ನಡೆಯಿತು. ಮಹಿಳೆಯರ ವಿಭಾಗದಲ್ಲಿ ಬಸವಲಿಂಗಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಸವಲಿಂಗಮ್ಮ ಬೆಂಗಳೂರು ಸೌಂದರ್ಯ ಇನ್ಸಿಟ್ಯೂಟ್‌ನಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡುತ್ತಿದ್ದು, ಅಲ್ಲಿಯೇ ದಿನನಿತ್ಯ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ. ಬಸವಲಿಂಗಮ್ಮಗೆ 20 ಸಾವಿರ ರೂ. ಪುರಸ್ಕಾರ ಹಾಗೂ ಪಾರಿತೋಷಕವನ್ನು ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿತರಿಸಿದರು.

ಹೆಣ್ಣು ಮಕ್ಕಳನ್ನು ಓದಿಸಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ನಮ್ಮ ಗ್ರಾಮದ ಯುವತಿ ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡುತ್ತಾ ಕ್ರೀಡೆಯಲ್ಲೂ ಸಾಹಸ ಮೆರೆಯುತ್ತಿರುವುದು ಸಂತಸದ ವಿಚಾರವಾಗಿದೆ. ಈ ಯುವತಿಗೆ ಇತರರಿಗೆ ಮಾದರಿಯಾಗಲಿ. ಸಂತೋಷ ಗ್ರಾಮದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net