ಪೊಲೀಸ್‌ ಇಲಾಖೆಯಿಂದ ಮ್ಯಾರಾಥಾನ್‌

Marathan
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದು ಶಾಸಕ ಸತೀಶ ಸೈಲ್ ಆಶಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ 2025ರ ಮ್ಯಾರಾಥಾನ್ 5ಕೆ ಓಟ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಽಕಾರಿ ಕೆ. ಲಕ್ಮೀಪ್ರಿಯಾ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಆದ್ದರಿಂದ ದೈಹಿಕವಾಗಿ ಸದೃಢರಾಗಲು ಪ್ರತಿ ದಿನ ಸ್ವಲ್ಪ ಸಮಯವನ್ನು ಮೀಸಲಿಡಿ ಎಂದರು.

ಎಸ್‌ಪಿ ಎಂ.ನಾರಾಯಣ ಮಾತನಾಡಿ ಪ್ರತಿ ಜಿಲ್ಲೆಯಲ್ಲಿ ಡ್ರಗ್ಸ್ ಪ್ರೀ ಹಾಗೂ ಸೈಬರ್ ಕ್ರೈಂ ಫ್ರೀ ಮುಕ್ತ ಕರ್ನಾಟಕ್ಕಾಗಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2 ಆವೃತ್ತಿ ಯ ಮ್ಯಾರಥಾನ್ ನ್ನು ಇಡಿ ರಾಜ್ಯದಲ್ಲೇ ಆಯೋಜನೆ ಮಾಡಲಾಗಿದೆ ಎಂದರು.

ಮ್ಯಾರಥಾನ್ ಓಟವು ರವೀಂದ್ರ ನಾಥ್ ಕಡಲ ತೀರದಿಂದ ಪ್ರಾರಂಭವಾಗಿ ಬಿಲ್ಟ್ ಸರ್ಕಲ್ , ಸವಿತ,ಮಾಲಾದೇವಿ, ಕಾಜುಭಾಗ್, ಅರ್ಜುನ ಚಿತ್ರ ಮoದಿರ , ಎಸ್.ಪಿ ಆಪೀಸ್ ಮೂಲಕ ರವೀಂದ್ರ ನಾಥ್ ಟಾಗೋರ್ ಕಡಲ ತೀರದಲ್ಲಿ ತಲುಪಿ ಮುಕ್ತಾಯವಾಯಿತು. ಸಾವಿರಕ್ಕೂ ಅಽಕ ಜನರು ಭಾಗವಹಿಸಿದ್ದರು.

ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ನಾಪತ್ತೆಯಾದವರ ಕುಟುಂಬದವರು ಸಾಕಿದ್ದ ನಾಯಿ ಯಜಮಾನನಿಲ್ಲದೇ ಅನಾಥವಾಗಿತ್ತು. ಎಸ್‌ಪಿ ಎಂ.ನಾರಾಯಣ ಅದನ್ನು ದತ್ತು ಪಡೆದು ತಮ್ಮ ಮನೆಗೆ ಕರೆತಂದು ತರಬೇತಿ ನೀಡಿದ್ದರು. ಭಾನುವಾರದ ಮ್ಯಾರಾಥಾನ್‌ನಲ್ಲಿ ನಾಯಿ ಓಡಿ ಗಮನ ಸೆಳೆಯಿತು. ಅದಕ್ಕೆ ಸಿಲ್ವರ್ ಮೆಡಲ್ ತೊಡಿಸಲಾಯಿತು.

ಮೆಡಲ್‌ಗಾಗಿ ನೂಕು ನುಗ್ಗಲು

ಮ್ಯಾರಾಥಾನ್‌ನಲ್ಲಿ ನಿರೀಕ್ಷೆಗೂ ಹೆಚ್ಚು ಜನ ಆಗಮಿಸಿದ್ದರು. ಭಾಗವಹಿಸಿದ್ದ ಎಲ್ಲರಿಗೂ ಮೆಡಲ್, ಪ್ರಮಾಣಪತ್ರ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು. ಆದರೆ, ನಿರೀಕ್ಷೆಗೂ ಹೆಚ್ಚು ಎಂದರೆ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರಿಂದ ಎಲ್ಲರಿಗೂ ಮೆಡಲ್ ಹಾಗೂ ಪ್ರಶಸ್ತಿ ಪತ್ರ ಸಿಕ್ಕಿಲ್ಲ. ಮೆಡಲ್ ಹಾಗೂ ಪ್ರಶಸ್ತಿ ಪತ್ರಕ್ಕಾಗಿ ನೂಕು ನುಗ್ಗಲು ಉಂಟಾಯಿತು. ಘೋಷಿಸಿದಂತೆ ಪ್ರಶಸ್ತಿ, ಪ್ರಮಾಣಪತ್ರ ಸಿಗದ ಬಗ್ಗೆ ಸ್ಪರ್ಧಾಳುಗಳು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net