

ಕಾರವಾರ: ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕು ಮತ್ತು ಸದಾ ಜಾಗೃತರಾಗಿರಬೇಕು ಎಂದು ಜಿಲ್ಲಾ ಪಂಂಚಾಯಿತಿ ಸಿಇಒ ಡಾ. ದಿಲೀಶ್ ಶಶಿ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಸರ್ಕಾರಿ ವೈದ್ಯಕೀಯ ಕಾಲೇಜ್, ಸೃಷ್ಟಿ ಸಂಸ್ಥೆ ಕುಮಟಾ, ಪದವಿ ಮಹಾವಿದ್ಯಾಲಯಗಳು, ರೆಡ್ ರಿಬ್ಬನ್ ಕ್ಲಬ್, ಎನ್‌ಎಸ್‌ಎಸ್ ಘಟಕ, ಕೂರ್ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ 17 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ನಗರದಲ್ಲಿ ಬುಧವಾರ ಆಯೋಜನೆಯಾಗಿದ್ದ ಜಿಲ್ಲಾ ಮಟ್ಟದ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಡುಗರ ವಿಭಾಗದಲ್ಲಿ ಕುಮಟಾದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ಮಾಲತೇಶ ಮಂಜಪ್ಪ ಹುಳಕೇರಿ ಪ್ರಥಮ, ಕಾರವಾರದ ಬಾಲಮಂದಿರದ ಕಾರ್ತಿಕ ರವೀಂದ್ರ ನಾಯ್ಕ ದ್ವಿತೀಯ, ಪ್ರತೀಕ ವಾಲೇಕರ ತೃತೀಯ ಹಾಗೂ ಹರಿ ದಾಡಿ ಸಮಾದಾನಕರ ಬಹುಮಾನವನ್ನು ಪಡೆದು ಕೊಂಡರು.
ಹುಡುಗಿಯರ ವಿಭಾಗದಲ್ಲಿ ಕಾರವಾರ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಬಿಂದು ಶ್ರೀಕಾಂತ ಹಿರೇಮಠ ಪ್ರಥಮ, ಕಾರವಾರದ ಬಾಲಮಂದಿರದ ಪೂರ್ವಿ ಟಿ.ಹರಿಕಂತ್ರ ದ್ವಿತೀಯ, ಸುಪ್ರಿತಾ ಪರಮೇಶ್ವರ ಚೆನ್ನಯ್ಯ ತೃತೀಯ, ಸಮಾಧಾನಕರ ಬಹುಮಾನವನ್ನು ನಯನಾ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಶ್ರೀಕಾಂತ ರಾಥೋಡ, ಡಿಎಚ್‌ಒ ಡಾ. ಬಿ.ವಿ.ನೀರಜ್, ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ನಟರಾಜ,ಶಿವಾಜಿ ಪದವಿ ಮಹಾವಿದ್ಯಾಲಯ ಬಾಡದ ದೈಹಿಕ ಶಿಕ್ಷಣಾಕಾರಿ ತಾರಾನಾಥ ಹರಿಕಂತ್ರ ಇದ್ದರು.