ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ದ.ಕ. ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪಿಯು ಕಾಲೇಜು ಬಾಲಕರ- ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆಯಿತು.
ಬಾಲಕರ ವಿಭಾಗ: ರಂಗಣ್ಣ ನಾಯಕರ್- ಪ್ರಥಮ(ಸ್ವಾಮಿ ವಿವೇಕಾನಂದ ಪಪೂ ಕಾಲೇಜು ಎಡಪದವು), ರಘುವೀರ್- ದ್ವಿತೀಯ(ಆಳ್ವಾಸ್), ದರ್ಶನ್- ತೃತೀಯ(ಎಸ್ಡಿಎಂ ಪಪೂ ಉಜಿರೆ) ಹನುಮಂತಯ್ಯ- ನಾಲ್ಕನೇ ಸ್ಥಾನ, ಶಿವಾನಂದ-ಐದನೇ ಸ್ಥಾನ(ಆಳ್ವಾಸ್), ಆದಿತ್ಯ- ಆರನೇ ಸ್ಥಾನ(ಎಸ್ಡಿಎಂ ಉಜಿರೆ) ಪಡೆದರು.
ಬಾಲಕಿಯರ ವಿಭಾಗ: ಚರಿಷ್ಮಾ- ಪ್ರಥಮ, ಘಾನವಿ- ದ್ವಿತೀಯ(ಆಳ್ವಾಸ್), ದೀಪ್ತಿ- ತೃತೀಯ(ಅರಂತೋಡು ಎಸ್ಎಂಪಿ ಕಾಲೇಜು ಸುಳ್ಯ), ಅಂಬಿಕಾ- 4ನೇ ಸ್ಥಾನ, ನವಿತಾ- 5ನೇ ಸ್ಥಾನ(ಆಳ್ವಾಸ್), ಸ್ವಾತಿ- 6ನೇ ಸ್ಥಾನ(ನೂಜಿಬಾಳ್ತಿಲ ಬೆಥನಿ ಪಪೂ ಕಾಲೇಜು) ಪಡೆದರು.
ಸಾಧಕ ಕ್ರೀಡಾಪಟುಗಳನ್ನು ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ, ನೂಜಿಬಾಳ್ತಿಲ ಬೆಥನಿ ಪಪೂ ಕಾಲೇಜು ಸಹಯೋಗದಲ್ಲಿ ಮಂಗಳೂರು ಸ್ಟ್ರಿಂಗ್ ಇನ್ಸ್ಟಿಟ್ಯೂಟ್ ಪ್ರಾಯೋಜಕತ್ವದಲ್ಲಿ ನೂಜಿಬಾಳ್ತಿಲದಲ್ಲಿ ಗುಡ್ಡಗಾಟು ಓಟ ನಡೆಯಿತು.