ಮರಾಟಿ ಸಮಾಜ ಸೇವಾ ಸಂಘದಿಂದ ಸ್ಮರಣೆ

Published on

ಸುಳ್ಯ : ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಮರಾಟಿ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಹಯೋಗದಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಸ್ಮರಣೆ ಮತ್ತು ಗಿರಿದರ್ಶಿನಿ ಸಭಾಭವನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.

ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅಜ್ಜಾವರ ಗಾಂಧೀಜಿ ಮತ್ತು ಶಾಸ್ತ್ರಿ ಅವರನ್ನು ಸ್ಮರಿಸಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಜನಾರ್ದನ ಬಿ.ಕುರುಂಜಿಭಾಗ್, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಉಪಾಧ್ಯಕ್ಷೆ ಸುಲೋಚನಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜನಾರ್ದನ ನಾಯ್ಕ ಕೇರ್ಪಳ, ಶೋಭಾ ಎ.ಕೆ.ನಾಯ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆ ರೇವತಿ ದೊಡ್ಡರಿ, ಕಾರ್ಯದರ್ಶಿ ಶೋಭಾ ಬೆಳ್ಳಾರೆ, ಮೀನಾಕ್ಷಿ ಭಸ್ಮಡ್ಕಯುವ ಗೌರವಾಧ್ಯಕ್ಷ ಮೋಹನ್ ಪೆರಾಜೆ, ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು, ಕಾರ್ಯದರ್ಶಿ ಮಿಥುನ್ ನಾಯ್ಕ, ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಹಿಳಾ ವೇದಿಕೆಯ ಸದಸ್ಯರು ರಘುಪತಿ ರಾಘವ ರಾಜರಾಂ ಭಜನೆ ಹಾಡಿದರು. ಕಾರ್ಯದರ್ಶಿ ರಮೇಶ್ ನೀರಬಿದಿರೆ ನಿರೂಪಿಸಿದರು. ಗಿರಿದರ್ಶಿನಿ ಪರಿಸರವನ್ನು ಸ್ವಚ್ಛ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net