ಜನರ ಬೇಡಿಕೆಗೆ ಸಂಘ ಸ್ಪಂದನೆ

marati
ಮರಾಟಿ ಸಮ್ಮಿಲನುದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಕೀಲ ಸಂತೋಷ್ ಕುಮಾರ್, ಚಂದ್ರ ನಾಯ್ಕ, ವಿ.ಪಿ ನಾಯ್ಕ, ಶಂಕರ್ ನಾಯ್ಕ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಕಾರ್ಕಳ ಮರಾಠಿ ಸಮಾಜ ಸೇವಾ ಸಂಘವು ಸಾಂಸ್ಕೃತಿಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ವಕೀಲ ಸಂತೋಷ್ ಕುಮಾರ್ ಹೇಳಿದರು.

ಅಜೆಕಾರು- ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಕಡ್ತಲ ಸಿರಿಬೈಲು ದೇವಸ್ಥಾನ ಸಭಾಂಗಣದಲ್ಲಿ ನಡೆದ ತಾಲೂಕು ಮರಾಟಿ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಂದ್ರ ನಾಯ್ಕ ಕೋಟೇಶ್ವರ ಮಾತನಾಡಿ, ಉಳ್ಳವರು ಇಲ್ಲದವರಿಗೆ ಹಂಚಬೇಕು. ಕಷ್ಟದಲ್ಲಿದ್ದವರಿಗೆ ನೆರವಾದರೆ ಬದುಕು ಸಾರ್ಥಕ ಎಂದರು.
ಸಂಘದ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿದರು. ಅತಿಥಿ ವಿ.ಪಿ ನಾಯ್ಕ, ಶಂಕರ್ ನಾಯ್ಕ, ಸುಗಂಧಿ ನಾಯ್ಕ, ಸುಧಾಕರ ನಾಯ್ಕ್, ಶಶಿಕಲ ಹಿರ್ಗಾನ, ಪವನ್ ದುರ್ಗಾ ಉಪಸ್ಥಿತರಿದ್ದರು.

ಶ್ರೀನಿವಾಸ ನಕ್ರೆ ಲೆಕ್ಕಪತ್ರ ಮಂಡಿಸಿದರು. ನಾಗೇಂದ್ರ ಹೆಬ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಾರ್ಷಿಕ ವರದಿ ವಾಚಿಸಿ ವಂದಿಸಿದರು. ನಿವೇದಿತಾ ಎಡಪದವು ನಿರೂಪಿಸಿದರು.

ಎಂಟು ಮಂದಿಗೆ ಸಾಧಕ ಪ್ರಶಸ್ತಿ

ಸಾಮೂಹಿಕ ಸತ್ಯನಾರಾಯಣ ಪೂಜೆ ಬಳಿಕ ಎಂಟು ಮಂದಿ ಸಾಧಕರಿಗೆ ಸಾಧಕ ಪ್ರಶಸ್ತಿ ಪ್ರದಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಘದ ವಾರ್ಷಿಕ ಮಹಾಸಭೆ, ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ನಿತೇಶ್ ಕುಮಾರ್ ಬಳಗದಿಂದ ಭಕ್ತಿಗಾನ ಸೌರಭ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net