ಮರಾಠಿ ಪುಂಡರ ಮೇಲೆ ಕ್ರಮವಾಗಲಿ

24MURAGOD1
Published on

ಮುರಗೋಡ: ಕರ್ತವ್ಯನಿರತ ಬಸ್​ ಚಾಲಕ&ನಿರ್ವಾಹಕರಿಗೆ ಬಾಳೆಕುಂದ್ರಿ ಗ್ರಾಮದ ಮರಾಠಿ ಪುಂಡರು ಮರಾಠಿ ಭಾಷೆಯಲ್ಲಿ ಮಾತಾಡಿ ಎಂದು ಹಲ್ಲೆ ಮಾಡಿದ್ದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೆಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳಿಯ ಕರವೇ ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ಉಪತಹಸೀಲ್ದಾರ್​ ಡಿ.ಬಿ. ಅಲ್ಲಯ್ಯನವರಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸವದತ್ತಿ ತಾಲೂಕು ಕರವೇ ಅಧ್ಯ ಉದಯ ಚಿಕ್ಕಣ್ಣವರ ಮಾತನಾಡಿ, ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದು ಮರಾಠಿಗರು ಕನ್ನಡಿಗರ ಮೇಲೆ ಹಲ್ಲೆ ಮಾಡುವ ಉದ್ದೇಶ ತಪ್ಪು. ಕರ್ತವ್ಯನಿರತ ಕಂಡಕ್ಟರ್​ ಮೇಲೆ ಪೋಸ್ಕೋ ಕೇಸ್​ ದಾಖಲು ಮಾಡಿದ್ದರ ಉದ್ಧೇಶವೇನು ಎಂದು ಪ್ರಶ್ನಿಸಿದರು. ತಣ ಕೇಸ್​ ವಾಪಸ್​ ಪಡೆಯದೆ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದರು.

ಕರವೇ ಮುಖಂಡರಾದ ಭೀಮಶಿ ಕಿವುಡಿ, ಕಿರಣ ಸಂಪಗಾವಿ, ದೀಪಕ ಬಾಳಿಕಾಯಿ, ಯುಮ್​ ಬಾಗೇವಾಡಿ, ಸಂತೋಷ ಕಾರಿ, ಕಾರ್ತಿಕ ಪಾಟೀಲ, ವಿನಾಯಕ ಪಾಸಲಕರ, ಬಸಯ್ಯ ಶಿವಪ್ಪಯ್ಯನವಮಠ, ಮುತ್ತು ಚಿಣ್ಣನವರ, ಶರೀಪ್​ ನದ್​ಾ, ಶೋಯಿಬ್​ ಬಾಗೇವಾಡಿ, ಮಹಾದೇವ ಬೆಳಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net