ಮರಾಠಿ ನಾಮಲಕಕ್ಕೆ ಕಪ್ಪು ಮಸಿ ಬಳಿದು ಪ್ರತೀಕಾರ

11Jaggu12-Web
ಬೆಳಗಾವಿ ಅಂಬೇಡ್ಕರ್ ರಸ್ತೆಯಲ್ಲಿ ಮರಾಠಿ ನಾಮಫಲಕಕ್ಕೆ ಕಪ್ಪು ಮಸಿ ಬಳಿಯುತ್ತಿರುವ ಕರವೇ ಕಾರ್ಯಕರ್ತನನ್ನು ಪೊಲೀಸ್ ಸಿಬ್ಬಂದಿ ತಡೆಯುತ್ತಿರುವುದು.
Published on

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಹಾಲಕ್ಷ್ಮೀ ಯಾತ್ರಿ ನಿವಾಸದ ಕಟ್ಟಡದ ಮೇಲಿದ್ದ ಕನ್ನಡದ ಅಕ್ಷರಗಳಿಗೆ ಶಿವಸೇನೆ ಪುಂಡರು ಗುರುವಾರ ಮಸಿ ಬಳಿದು ಪುಂಡಾಟಿಕೆ ಮಾಡಿದ್ದಾರೆ.

ಮುಖಂಡ ಸಂಜಯ ಪವಾರ್ ನೇತೃತ್ವದಲ್ಲಿ ಮಳಿಗೆಗಳ ಮಾಲೀಕರಿಗೆ ಬೆದರಿಕೆ ಹಾಕಿದ ಶಿವಸೇನೆ ಕಾರ್ಯಕರ್ತರು, ಕನ್ನಡ ನಾಮಫಲಕವಿದ್ದರೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಬೆಳಗಾವಿಯಲ್ಲೂ ಫಲಕಕ್ಕೆ ಮಸಿ: ಈ ವಿದ್ಯಮಾನ ನಡೆಯುತ್ತಿದ್ದಂತೆ ಬೆಳಗಾವಿಯಲ್ಲಿ ಆಕ್ರೋಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಪ್ರಮುಖರು ಎಂಇಎಸ್ ಪುಂಡರಿಗೆ ತಿರುಗೇಟು ಕೊಟ್ಟಿದ್ದಾರೆ. ನಗರದ ಅಂಬೇಡ್ಕರ್ ರಸ್ತೆಯಲ್ಲಿ ಮರಾಠಿ ನಾಮಫಲಕಕ್ಕೆ ಗುರುವಾರ ಕಪ್ಪು ಮಸಿ ಬಳಿದರು. ಈ ವೇಳೆ ಪೊಲೀಸರು, ಕರವೇ ಕಾರ್ಯಕರ್ತರ ಮನವೊಲಿಸಿ ಅವರ ಬಳಿಯಿದ್ದ ಮಸಿ ತುಂಬಿದ ಬಾಟಲ್ ವಶಕ್ಕೆ ಪಡೆದರು. ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಮಾತನಾಡಿ, ಶಿವಸೇನೆ ಪುಂಡರು ಕೊಲ್ಲಾಪುರ ಮಹಾಲಕ್ಷ್ಮೀ ಮಂದಿರದ ಬಳಿಯ ಕನ್ನಡದ ನಾಮ ಫಲಕಗಳಿಗೆ ಮಸಿ ಬಳಿದಿದ್ದಾರೆ. ಬೆಳಗಾವಿಯಲ್ಲಿಯೂ ಸಹ ಯಾರೂ ಮರಾಠಿ ನಾಮಫಲಕ ಅಳವಡಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೋಷನ್ ಶೆಟ್ಟಿ, ಕಸ್ತೂರಿ ಬಾವಿ, ನಾಗೇಶ ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net