ಮರಾಠರ ಅಸ್ತಿತ್ವ ಉಳಿಸಿದ್ದು ಸಂಭಾಜಿ ಮಹಾರಾಜರು

16Jaggu9-web
ಬೆಳಗಾವಿ ಧರ್ಮವೀರ ಸಂಭಾಜಿ ರಾಜೇ ಚೌಕ್ ಸ್ಮಾರಕ ಸೌಂದರ್ಯೀಕರಣ ಸಮಿತಿಯಿಂದ ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನ ಆಚರಿಸಲಾಯಿತು. ಅನಿಲ ಬೆನಕೆ, ಸುನೀಲ ಜಾಧವ, ಶ್ರೀನಾಥ ಪವಾರ, ಪ್ರಮೋದ ಕಗ್ರಾಳಕರ್, ನಿಶಾಂತ ಕುಡೆ, ಶ್ರವಣ ಜೂಟ್, ಮಂಥನ ಕಮೂಲೆ, ಸುಮಿತ ಪಾಟೀಲ, ಪ್ರಸಾದ ಪವಾರ ಇತರರು ಇದ್ದರು.
Published on

ಬೆಳಗಾವಿ: ಸಂಭಾಜಿ ಮಹಾರಾಜರು ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ವೀರರು. ಹಲವು ಯುದ್ಧಗಳನ್ನು ಗೆದ್ದು ಮರಾಠ ರಾಜವಂಶದ ಅಸ್ತಿತ್ವ ಉಳಿಸಿದವರು ಎಂದು ಮಾಜಿ ಶಾಸಕ ಅನಿಲ ಬೆನೆಕೆ ಹೇಳಿದರು. ನಗರದ ಧರ್ಮವೀರ ಸಂಭಾಜಿ ರಾಜೇ ಚೌಕ್ ಸ್ಮಾರಕ ಸೌಂದರ್ಯೀಕರಣ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಸಂಸ್ಕೃತ ಭಾಷೆ ಕರಗತ ಮಾಡಿಕೊಂಡವರು. 14ನೇ ವಯಸ್ಸಿನಲ್ಲಿ ಅವರು ‘ಬುಧ ಭೂಷಣ’ ಎಂಬ ಸಂಸ್ಕೃತ ಪುಸ್ತಕ ಬರೆದರು. ಅವರು ಕೇಶವ ಭಟ್ ಮತ್ತು ಉಮಾಜಿ ಪಂಡಿತರ ಬಳಿ ಶಿಕ್ಷಣ ಪಡೆದರು. ವಿದೇಶಿ ಲೇಖಕರೂ ಅವರ ಯುದ್ಧ ನೀತಿ ಹೊಗಳಿದರು ಎಂದರು.ಸಮಿತಿ ಅಧ್ಯಕ್ಷ ಸುನೀಲ ಜಾಧವ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಾಥ ಪವಾರ, ಪ್ರಮೋದ ಕಗ್ರಾಳಕರ್, ನಿಶಾಂತ ಕುಡೆ, ಶ್ರವಣ ಜೂಟ್, ಮಂಥನ ಕಮೂಲೆ, ಸುಮಿತ ಪಾಟೀಲ, ಪ್ರಸಾದ ಪವಾರ, ರಿಷಬ್ ಮೋಹಿತೆ, ನಿಖಿಲ್ ಪಾಟೀಲ, ಮಹೇಶ ಸೋಂದಿ, ಪ್ರಥಮೇಶ ಕಿಲ್ಲೇಕರ, ಓಂಕಾರ ಮೋಹಿತೆ, ಪ್ರಸಾದ ಮೋರೆ, ಓಂಕಾರ ಪೂಜಾರಿ, ಕುಂಜ್ ನವಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net