ಮರಾಠಾ ಸಮುದಾಯದ ಸಾಧಕರಿಗೆ ಸನ್ಮಾನ

6dvk 1
Published on

ಬೆಳಗಾವಿ : ಇಂದಿನ ಯುವ ಪೀಳಿಗೆ ಮೊಬೈಲ್ ಮತ್ತು ಇತರೆ ವ್ಯಸನಗಳಿಗೆ ವಾಲುತ್ತಿದ್ದು, ಅಂಥವರನ್ನು ಆಯಾ ಸಮುದಾಯದ ಪ್ರಮುಖರು ಸರಿದಾರಿಗೆ ತರುವ ಜತೆಗೆ ಸಾಧಕರನ್ನಾಗಿ ಬೆಳೆಸಲು ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕಿದೆ ಎಂದು ಕಾಡಾ ಅಧ್ಯಕ್ಷ ಯುವರಾಜ ಕದಂ ಹೇಳಿದರು.

ನಗರದ ಜತ್ತಿ ಮಠದಲ್ಲಿ ಭಾನುವಾರ ಸಮಸ್ತ ಮರಾಠ ಸಮುದಾಯ ಸಂಘಟನೆಯಿಂದ ಏರ್ಪಡಿಸಿದ್ದ ದಸರಾ ಕುಸ್ತಿ ಸ್ಪರ್ಧೆಯ ವಿಜೇತರು ಹಾಗೂ ಸಮುದಾಯದ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೈಸೂರು ದಸರಾ ಕುಸ್ತಿಯಲ್ಲಿ 52 ವರ್ಷಗಳ ಬಳಿಕ ಬೆಳಗಾವಿಗೆ ಕರ್ನಾಟಕ ಕಂಠೀರವ ಕೇಸರಿ ಗದೆ ಗೆದ್ದುಕೊಂಡಿರುವ ಕಾಮೇಶ ಪಾಟೀಲ, ದಸರಾ ಕಿಶೋರಿ ವಿಜೇತ ಸ್ವಾತಿ ಪಾಟೀಲ, ವಿವಿಧ ವಿಭಾಗಗಳ ವಿಜೇತರಾದ ಪ್ರೇಮ ಜಾಧವ, ಮಹೇಶ ಬಿರ್ಜೆ, ವಿನಾಯಕ ಪಾಟೀಲ, ಸಮರ್ಥ ಡುಕರೆ, ಪ್ರಾಂಜಲ ತುಳಜಾಯಿ, ಭಕ್ತಿ ಪಾಟೀಲ, ಸಾನಿಕಾ ಹಿರೋಜಿ, ಶ್ರಾವಣಿ ತರಳೆ, ಅನುಶ್ರೀ ಚೌಗುಲೆ, ಕೋಚ್ ಸ್ಮಿತಾ ಪಾಟೀಲ, ಪಿಎಸ್‌ಐ ಹುದ್ದೆಗೆ ನೇಮಕವಾದ ಶ್ರುತಿ ಪಾಟೀಲ, ಕಾಡಾ ಅಧ್ಯಕ್ಷ ಯುವರಾಜ ಕದಂರನ್ನು ಸನ್ಮಾನಿಸಲಾಯಿತು.

ಸಾಹಿತಿ ಗಣವಂತ ಪಾಟೀಲ, ವಕೀಲ ಅಮರ ಯಳ್ಳೂರಕರ, ನಾಗೇಶ ದೇಸಾಯಿ, ಪ್ರಶಾಂತ ಬಾತಖಾಂಡೆ, ಮಾಜಿ ಉಪಪೇಯರ್‌ರಾದ ಸಂಜಯ ಶಿಂಧೆ, ರೇಷ್ಮಾ ಪಾಟಿಲ, ಮಾಜಿ ಪಾಲಿಕೆ ಸದಸ್ಯ ರಾಜು ಬಿರ್ಜೆ, ಪ್ರವೀಣ ಪಾಟೀಲ, ಮಾಧುರಿ ಜಾಧವ, ಸುನೀಲ ಯಳ್ಳೂರ, ಆನಂದ ಪಾಟೀಲ, ಸುನೀಲ ಜಾಧವ, ಪ್ರಶಾಂತ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net