

ಧಾರವಾಡ: ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮರಾಠಾ ಸಮÁಜದ ಮುಖಂಡರು ಜಿಲ್ಲಾಽಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮಂಡಳದ ಸದಸ್ಯರ ಪಟ್ಟಿಯಲ್ಲಿ ಲೋಪಗಳಾಗಿದ್ದು, ಮೃತರ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ. ಈ ಬಗ್ಗೆ ಚುನಾವಣಾಽಕಾರಿಗೆ ಹಲವು ಬಾರಿ ಲಿಖಿತ ತಕರಾರು ಅರ್ಜಿ ಸಲ್ಲಿಸಿದರೂ ಉತ್ತರ ಕೊಟ್ಟಿಲ್ಲ. ಹಾಲಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಚುನಾವಣಾ ಅಽಕಾರಿಗಳು ಮತ್ತು ಸಲಹಾ ಸಮಿತಿ ಸದಸ್ಯರು ಶಾಮೀಲಾಗಿದ್ದಾರೆ. ಮೃತರ ಹೆಸರಲ್ಲಿ ಬೇರೆಯವರಿಂದ ಮತದಾನ ಮÁಡಿಸಿದ್ದಾರೆ. ಮತ ಪತ್ರಕ್ಕೂ ಹಾಗೂ ಮತ ಪತ್ರ ಸಂಖ್ಯೆಗೂ ಹೊಂದಾಣಿಕೆ ಇಲ್ಲ. ಚುನಾವಣಾಽಕಾರಿಗಳು ಮತದಾನದ ಪತ್ರಗಳನ್ನು ಸೀಲ್ ಮÁಡದೆ ಕಾನೂನುಬಾಹಿರವಾಗಿ ಇಟ್ಟುಕೊಂಡು ಬಂದಿದ್ದನ್ನು ನೋಡಿದರೆ ಚುನಾವಣೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಾಗುತ್ತದೆ. ಇದೆಲ್ಲದರ ಕುರಿತು ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
ನವೀನ ಕದಂ, ವಿಜಯ ಭೋಸಲೆ, ನಾರಾಯಣ ಹುಬ್ಬಳ್ಳಿ, ಬಸವರಾಜ ಜಾಧವ, ಮಂಜುನಾಥ ಜಾಧವ, ಮಂಜುನಾಥ ಮÁನೆ, ಬಸವರಾಜ ಗುಂಡನವರ, ಶಿವಾಜಿ ಘಾಟಗೆ, ಗಂಗಣ್ಣ ಜಮದಾಳೆ, ಈಶ್ವರ ಕದಂ, ಕಿರಣ ಪವಾರ, ರಾಜೇಂದ್ರ ಜಾಧವ, ದಿನೇಶ್ ದುಮ್ಮಳ, ಅರುಣ ಜಾಧವ, ವಿಠ್ಠಲ ಚೌವ್ಹಾಣ, ನಾರಾಯಣ ಸುಳ್ಳದ, ಕೇತನ್ ಪವಾರ, ಇತರರು ಪಾಲ್ಗೊಂಡಿದ್ದರು.