ಮರಾಠ ಲಘು ಪದಾತಿದಳದಿಂದ ಶೌರ್ಯವೀರ ಓಟ

26dvk 3
ಬೆಳಗಾವಿಯಲ್ಲಿ ಎಂಎಲ್‌ಐಆರ್‌ಸಿಯಿಂದ ಭಾನುವಾರ ಏರ್ಪಡಿಸಿದ್ದ ಮ್ಯಾರಥಾನ್‌ಗೆ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ ಚಾಲನೆ ನೀಡಿದರು.
Published on

ಬೆಳಗಾವಿ: ಭಾರತೀಯ ಸೇನೆಯ 79ನೇ ಪದಾತಿ ದಳದ ದಿನ (ಇನ್‌ಫೆಂಟ್ರಿ ಡೇ) ಪ್ರಯುಕ್ತ ಇಲ್ಲಿನ ಮರಾಠ ಲಘು ಪದಾತಿದಳ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ) ವತಿಯಿಂದ ನಗರದಲ್ಲಿ ಭಾನುವಾರ ಶೌರ್ಯವೀರ ಓಟ ಶೀರ್ಷಿಕೆಯಡಿಯಲ್ಲಿ ಮ್ಯಾರಥಾನ್ ಏರ್ಪಡಿಸಲಾಗಿತ್ತು.

ಎಂಎಲ್‌ಐಆರ್‌ಸಿ ಆವರಣದ ಶಿವಾಜಿ ಕ್ರೀಡಾಂಗಣದಿಂದ ಆರಂಭಗೊಂಡ ಓಟಕ್ಕೆ ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ ಚಾಲನೆ ನೀಡಿ ಮಾತನಾಡಿ, ಈ ಓಟ ನಮ್ಮ ಪದಾತಿಯ ಚೈತನ್ಯ ಹೆಚ್ಚಿಸಿದೆ. ಧೈರ್ಯ, ಸಹಿಷ್ಣುತೆ ಮತ್ತು ಏಕತೆಯ ಧ್ಯೋತಕವಾಗಿ ಓಟ ನಡೆಯುತ್ತಿದೆ. ಅಲ್ಲದೇ ಶಿಸ್ತು, ಸಮರ್ಪಣೆ ಕಲಿಯಬಹುದಾಗಿದೆ ಎಂದರು.

5 ಕಿಮೀ, 10 ಕಿಮೀ ಹಾಗೂ 21 ಕಿಮೀ ವಿಭಾಗದಲ್ಲಿ 17 ವರ್ಷದೊಳಗಿನ ವಿಭಾಗದಿಂದ ಹಿಡಿದು 50 ವರ್ಷ ಮೇಲ್ಪಟ್ಟವರವರೆಗೆ ಆಯಾ ವಯೋಮಾನಕ್ಕೆ ತಕ್ಕಂತೆ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಪದಾತಿ ದಳದ ಸೈನಿಕರು, ಸೇನಾಧಿಕಾರಿಗಳು, ಮಾಜಿ ಸೈನಿಕರು ಹಾಗೂ ಕುಟುಂಬ ಸದಸ್ಯರು, ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನಾಗರಿಕರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಅಥ್ಲೆಟಿಕ್ಸ್‌ಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net