ಮ್ಯಾರಥಾನ್‌ನಲ್ಲಿ ಗಣೇಶ್‌ಗೆ ಪ್ರಥಮ ಸ್ಥಾನ

mararathon
Published on

ಕುಶಾಲನಗರ:

ಮಂಗಳೂರು ರನ್ನರ್ಸ್ ಕ್ಲಬ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈಚೆಗೆ ಅಯೋಜಿಸಲಾಗಿದ್ದ ನಾಲ್ಕನೇ ಅವೃತಿ ನೀವಿಯಸ್ ಮಂಗಳೂರು ಮ್ಯಾರಥಾನ್ 2025 ಅಂಗವಾಗಿ ಮಂಗಳೂರಿನಲ್ಲಿ ನಡೆದ ವಿವಿಧ ಹಂತದ 45 ರಿಂದ 55 ವಯೋಮಿತಿಯ ಮ್ಯಾರಥಾನ್ ಓಟದಲ್ಲಿ ಕೊಡಗಿನ ತೊರೆನೂರು ಗ್ರಾಮದ ಗಣೇಶ್ ಪ್ರಥಮ ಸ್ಧಾನ ಗಳಿಸಿದ್ದಾರೆ.

ದ್ವಿತೀಯ ಸ್ಥಾನವನ್ನು ಕೊಡಗು ಮೂಲದ ಮಂಗಳೂರಿನ ವಾಸವಿರುವ ಮಡಿಕೇರಿಯ ಲೋಕೇಶ್ ಪಡೆದುಕೊಂಡಿದ್ದಾರೆ. ಈ ವಯೋಮಿತಿಯ ಓಟದಲ್ಲಿ 800 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದರು.

ವಿಜೇತರಿಗೆ ಪ್ರಶಸ್ತಿ, ಪದಕ ಹಾಗೂ ನಗದನ್ನು ಶಾಸಕ ವೇದವ್ಯಾಸ ಕಾಮತ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಜೋಯಲ್ ಡಿಸೋಜ, ಕ್ಲಬ್ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net