ಮಾರನಕೊಡಿಗೆ ನಟರಾಜ್ ಹಾಲಂದೂರು ಪಿಎಸಿಎಸ್ ಅಧ್ಯಕ್ಷ

8sri-5
Published on

ಶೃಂಗೇರಿ: ಶತಮಾನದ ಇತಿಹಾಸ ಹೊಂದಿರುವ ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಮೆಣಸೆಯಲ್ಲಿರುವ ಹಾಲಂದೂರು ಪಿಎಸಿಎಸ್ ನೂತನ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಹೇಳಿದರು.

ಮೆಣಸೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಅಭಿನಂದನಾ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈಗಾಗಲೇ ಸಂಘದಿಂದ ಕಳೆದ ವರ್ಷ ಸೂಪರ್ ಮಾರ್ಕೆಟ್ ಆರಂಭಿಸಲಾಗಿದ್ದು, ಗೃಹ ಬಳಕೆಯ ಎಲ್ಲ ವಸ್ತುಗಳು ಒಂದೆಡೆ ಗ್ರಾಹಕರಿಗೆ ದೊರಕುವ ವ್ಯವಸ್ಥೆ ಮಾಡಲಾಗಿದೆ. ಸಂಘದ ಷೇರುದಾರರ ಸಹಕಾರದಿಂದ ಸಂಘವನ್ನು ಮತ್ತಷ್ಟು ಉನ್ನತಿಕರಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದರು.

ಮಾಜಿ ಅಧ್ಯಕ್ಷ ಎಂ.ಎನ್.ಚಂದ್ರಶೇಖರ್ ಮಾತನಾಡಿ, ಸುತ್ತ ಮುತ್ತಲಿನ ಗ್ರಾಮಗಳ ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಸ್ತು ಪೂರೈಕೆ ಮಾಡುತ್ತಿರುವ ಸಂಸ್ಥೆ, ಸಕಾಲಕ್ಕೆ ಗೊಬ್ಬರ, ಮೈಲುತುತ್ತಾ ಮತ್ತಿತರ ಕೃಷಿ ಉಪಕರಣ ಪೂರೈಸುತ್ತಿದೆ. ಷೇರುದಾರರ ಸಹಕಾರ ನಿರಂತರವಾಗಿದ್ದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಸಂಘದ ನಿರ್ದೇಶಕರು, ಮೆಣಸೆ ಗ್ರಾಪಂ ಸದಸ್ಯರಾದ ತ್ರಿಮೂರ್ತಿ, ಶಾಮಣ್ಣ, ಬೆಟ್ಟಗೆರೆ ಪಿಎಸಿಎಸ್ ಅಧ್ಯಕ್ಷ ರಮೇಶ್‌ಭಟ್, ಕಾನುವಳ್ಳಿ ಕೃಷ್ಣಪ್ಪಗೌಡ, ಕೆ.ಆರ್.ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net