ಕೆಂಡದ ಮಾರಮ್ಮ ಜಾತ್ರಾ ಮಹೋತ್ಸವ

16blrp1
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹೊಸಪೇಟೆ-ತೊಳಲು ಗ್ರಾಮದಲ್ಲಿ 10ನೇ ವರ್ಷದ ಕೆಂಡದ ಮಾರಮ್ಮ ದೇವಿ ಹಾಗೂ ಭೂತಪ್ಪ ಸ್ವಾಮಿಯವರ ಜಾತ್ರಾ ಮಹೋತ್ಸವ ಸಡಗರ-ಸಂಭ್ರಮದಿಂದ ಜರುಗಿತು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಹೊಸಪೇಟೆ-ತೊಳಲು ಗ್ರಾಮದಲ್ಲಿ 10ನೇ ವರ್ಷದ ಕೆಂಡದ ಮಾರಮ್ಮ ಹಾಗೂ ಭೂತಪ್ಪ ಸ್ವಾಮಿಯವರ ಜಾತ್ರಾ ಮಹೋತ್ಸವವು ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಕೆಂಡದ ಮಾರಮ್ಮ ಹಾಗೂ ಭೂತಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಚಂದ್ರಶೇಖರ್ ನೇತೃತ್ವದಲ್ಲಿ ಜರುಗಿದ ಪೂಜಾ ಮಹೋತ್ಸವವು ಪ್ರಾರಂಭದ ಮೊದಲ ದಿನ ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚ ಕಳಸ ಸ್ಥಾಪನೆ, ನವಗ್ರಹ ಪೂಜೆ, ಗಣ, ನವಗ್ರಹ ಹಾಗೂ ದುರ್ಗಾ ಹೋಮ, ಪೂರ್ಣಾಹುತಿ ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಪೂಜೋತ್ಸವದ ಕೊನೆಯ ದಿನ ಪುಣ್ಯ ಸ್ಥಳದಲ್ಲಿ ಅಭಿಷೇಕ, ದೃಷ್ಠಿ ಪೂಜೆ, ದೇವರುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಕೊಂಡೋತ್ಸವ ನಡೆಯಿತು. ಈ ವೇಳೆ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಮಾರಮ್ಮ ದೇವಿ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net