ಗ್ರಾಮದೇವತೆ ಮಾರಮ್ಮ ಪೂಜೆ

SRP_27-03jpj
Published on


ಶ್ರೀರಂಗಪಟ್ಟಣ : ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗ್ರಾಮದೇವತೆ ಮಾರಮ್ಮ ದೇವಿ ಪೂಜಾ ಕಾರ್ಯ ವಿಜೃಂಭಣೆಯಿಂದ ನೆರವೇರಿತು. ಗ್ರಾಮ ಹೊರವಲಯದ ವಿರಿಜಾ ನಾಲೆ ಬಳಿ ದೇವಿಯ ಉತ್ಸವವನ್ನು ಗುಡ್ಡಪ್ಪ ದಿನೇಶ್ ನೇತೃತ್ವದಲ್ಲಿ ಮಡಿಪೂಜೆಗಳನ್ನು ಅರ್ಪಿಸಲಾಯಿತು. ಪಂಜು ಮತ್ತು ಕರ್ಪೂರದ ಸೇವೆಯೊಂದಿಗೆ ದಾರಿಯುದ್ದಕ್ಕೂ ಈಡುಗಾಯಿ ಹಾಕಿ ಮಂಗಳ ವಾದ್ಯ ಹಾಗೂ ತಮಟೆ ನಗಾರಿ ಸದ್ದಿನೊಂದಿಗೆ ಗ್ರಾಮಕ್ಕೆ ಕರೆತರೆಲಾಯಿತು. ಈ ವೇಳೆ ತಮ್ಮ ಇಷ್ಠಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತಿದ್ದ ಗ್ರಾಮದ ಮಹಿಳೆಯರು ಹಾಗೂ ಪುರುಷರು ನಾಲೆಯಿಂದ ದೇವರ ಉತ್ಸವದೊಂದಿಗೆ ಬಾಯಿ ಬೀಗ ಹಾಕಿಸಿಕೊಂಡು ಮೆರವಣಿಗೆ ಸಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಹರಕೆ ಸಮರ್ಪಿಸಿದರು.
ಗ್ರಾಮದ ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಮಾರಮ್ಮ ದೇವಿಗೆ ತಂಬಿಟ್ಟು ಆರತಿ, ಹಣ್ಣು ಕಾಯಿ ಸಮರ್ಪಿಸಿ ಶಕ್ತಿ ದೇವಿಗೆ ಪೂಜಿಸಿದರು. ಗ್ರಾಮದ ಯಜಮಾನ ಶ್ರೀಧರ್, ಶ್ರೀನಿವಾಸ್, ವಾರದ ದಾಸಪ್ಪ ಸೇರಿದಂತೆ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net