ಹೊಸಹಳ್ಳಿಯಲ್ಲಿ ಮಾರಮ್ಮನ ಉತ್ಸವದ ಸಂಭ್ರಮ: ಜಾನಪದ ಕಲಾತಂಡದೊಂದಿಗೆ ಮೆರವಣಿಗೆ

Maramma festival celebrations in Hosahalli Mandya
Published on

ಮಂಡ್ಯ: ನಗರದಲ್ಲಿರುವ ಹೊಸಹಳ್ಳಿ ರಾಮನಹಳ್ಳಿ ಗ್ರಾಮಸ್ಥರು ಗ್ರಾಮದೇವತೆ ಮಾರಮ್ಮ ಮತ್ತು ಬಿಸಿಲು ಮಾರಮ್ಮ ಉತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ನಂತರ ಸಾಮೂಹಿಕ ತಂಬಟ್ಟಿನ ಆರತಿಯೊಂದಿಗೆ ಪೂಜಾ ಕುಣಿತ, ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವಾಲಯದಲ್ಲಿ ಗ್ರಾಮದೇವತೆಗೆ ತಂಪು ತೋರಿದರು.

ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವತೆ ಮಾರಮ್ಮ ಹಬ್ಬ ಮೂರು ದಿನ ನಡೆಯುತ್ತದೆ. ಈ ಹಬ್ಬದಿಂದ ಸಮೃದ್ಧವಾದ ಮಳೆ, ಬೆಳೆಯಾಗಿ ಎಲ್ಲರೂ ನೆಮ್ಮದಿಯಾಗಿರುತ್ತಾರೆ ಎನ್ನುವುದು ಪೂರ್ವಿಕರ ನಂಬಿಕೆಯಾಗಿದೆ. ಹಬ್ಬದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹಬ್ಬದ ಅಂಗವಾಗಿ ಮಂಗಳವಾರ ನಡೆದ ಅಕ್ಕಿ ತೊಳೆಯುವ ಶಾಸ್ತದಲ್ಲಿ ಅತ್ತಿಗೆ ಮತ್ತು ನಾದಿನಿ, ಅಕ್ಕ ಮತ್ತು ತಂಗಿಯರು ನೀರು ಎರಚಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net