ವಿವಿಧೆಡೆ ಮಾರಮ್ಮನ ಹಬ್ಬದ ಸಡಗರ

ಗುಂಡ್ಲುಪೇಟೆ ಪಟ್ಟಣದ ಕೋಟೆ ಮಾರಮ್ಮನ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರು.
ಗುಂಡ್ಲುಪೇಟೆ ಪಟ್ಟಣದ ಕೋಟೆ ಮಾರಮ್ಮನ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರು.
Published on

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಮಾರಮ್ಮನ ಹಬ್ಬವನ್ನು ಭಕ್ತರು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.

ತಾಲೂಕಿನ ಶಿಂಡನಪುರ ಹಾಗೂ ಕೊಡಸೋಗೆ ಗ್ರಾಮಗಳಲ್ಲಿ ಗ್ರಾಮದೇವತೆ ಮಾರಮ್ಮನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಟ್ಟಣದ ಕೋಟೆ ಮಾರಮ್ಮನ ದೇಗುಲವನ್ನು ಶುಚಿಗೊಳಿಸಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹಕ್ಕೆ ಬೆಳ್ಳಿಯ ಮುಖವಾಡ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೋಮ ಹವನ ಸೇರಿದಂತೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಹರಕೆಹೊತ್ತ ಭಕ್ತರು ತಂಪಿನ ಪೂಜೆ, ಬೇವಿನ ಸೊಪ್ಪು ಹಾಗೂ ಎಳನೀರು ಅಭಿಷೇಕ ಮುಂತಾದ ಸೇವೆಗಳನ್ನು ನಡೆಸಿದರು. ತಂಪಿನ ಹಾಗೂ ತಂಬಿಟ್ಟಿನ ದೀಪ ಬೆಳಗಿಸಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net