

ಭರಮಸಾಗರ: ಪಟ್ಟಣದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಮಂಗಳವಾರ, ಬುಧವಾರ ನಡೆಯಿತು. ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
ಮದಲಿಂಗಿತ್ತಿ ಶಾಸ್ತ್ರ, ಹೊಳೆ ಪೂಜೆ, ಅಲಂಕೃತ ತೆರೆದ ವಾಹದಲ್ಲಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಬುಧವಾರ ಬೇವು ಬೇಟೆ, ವಿಶೇಷ ಪೂಜೆ, ಅಲಂಕಾರ ನಡೆಸಲಾಯಿತು.