ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

20 mlr 1
Published on

ಮಾಲೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 50 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಾಹನಕ್ಕೆ ತುಂಬುತ್ತಿದ್ದ ಆರೋಪಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ಕಾರ್ಯಕರ್ತರು ವಾಲು ಸಮೇತ ಹಿಡಿದು ಶನಿವಾರ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಆರೋಪಿ ನಾಪತ್ತೆಯಾಗಿದ್ದಾನೆ.

ಪಟ್ಟಣದ ಕುಂಬಾರಪೇಟೆಯಲ್ಲಿ ನಾಸೀರುಲ್ಲಾಖಾನ್ ಎಂಬಾತ ಪಡಿತರ ಅಕ್ಕಿಯನ್ನು ಕೆಜಿಗೆ 15 ರೂ.ಗಳಂತೆ ಖರೀದಿಸಿ ದಾಸ್ತಾನು ಮಾಡಿದ್ದ. ಬಂಗಾರಪೇಟೆಯ ಅಕ್ಕಿಮಿಲ್‌ಗೆ ಸಾಗಿಸಲೆಂದು 2 ಟೆಂಪೋಗಳಿಗೆ ತುಂಬಿಸುತ್ತಿದ್ದಾಗ ಸ್ಥಳಕ್ಕೆ ಹೋದ ಕರವೇ ತಾಲೂಕು ಟಕದ ಅಧ್ಯಕ್ಷ ಎಂ.ಎಸ್.ಶ್ರೀನಿವಾಸ್ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಖಂಡನೆ: ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಒಪ್ಪಿಸಿದ್ದರೂ ಆರೋಪಿ ಸ್ಥಳದಿಂದ ನಾಪತ್ತೆಯಾದ್ದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ವಾರಿಕಾಂಬಾ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಬಂಧನಕ್ಕೆ ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ಆಗಮಿಸಿ, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಕರವೇ ತಾಲೂಕು ಟಕದ ಅಧ್ಯಕ್ಷ ಎಂ.ಎಸ್.ಶ್ರೀನಿವಾಸ್, ಜಿಲ್ಲಾ ಮಹಿಳಾ ಟಕದ ಅಧ್ಯಕ್ಷೆ ಲತಾಬಾಯಿ ವಾಡಿಕ್, ಕಾರ್ಯಕರ್ತರಾದ ಶಂಕರಪ್ಪ, ಮುರಳೀಧರ್, ಸಂತೋಷ್, ಮಹೇಶ್, ಪಿಎಸ್‌ಐ ಆಂಜಿನಪ್ಪ, ಆಹಾರ ನಿರೀಕ್ಷಕ ಚಂದ್ರಮೋಹನ್, ಎ.ಎಸ್.ಐ.ರಾಮಕೃಷ್ಣಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net