

ಹುಬ್ಬಳ್ಳಿ: ಮರಕುಂಬಿ ಪ್ರಕರಣದಲ್ಲಿ ನ್ಯಾಯಾಲಯ ಪ್ರಕಟಿಸಿದ ತೀರ್ಪು ಸ್ವಾಗತಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಧಾರವಾಡ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಲಾಯಿತು.
ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ 2014ರಂದು ದಲಿತರ ಕೇರಿಗೆ ನುಗ್ಗಿ ಸವರ್ಣೀಯರು ಹಲ್ಲೆ ಮತ್ತು ದೌರ್ಜನ್ಯ ನಡೆಸಿದ್ದರು. ಅಂದು ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದಪ್ರತಿವಾದ ಆಲಿಸಿದ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕಟಿಸಿದ ತೀರ್ಪು ದಲಿತರಿಗೆ ಸಂತೋಷ ತಂದಿದೆ ಎಂದು ಬಣ್ಣಿಸಲಾಯಿತು.
ಜಿಲ್ಲಾಧ್ಯಕ್ಷ ಸಿದ್ದಾರ್ಥ ಮಲ್ಲಮ್ಮನವರ, ಹುಬ್ಬಳ್ಳಿ ಶಹರ ಪ್ರಧಾನ ಕಾರ್ಯದರ್ಶಿ ಶ್ರೀಧರ ಕಂದಗಲ್, ಹುಬ್ಬಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ ಮಾದರ, ಹಿರಿಯರಾದ ವಿರೂಪಾಕ್ಷಿ ಚಲವಾದಿ, ಪಕ್ಕಣ್ಣ ದೊಡಮನಿ, ಗುರನಾಥ ಕ್ವಾಟಿ, ಸುರೇಶ ಹುಣಸಿಮರದ, ಶಶಿಕಿರಣ ಹೊಲ್ಲೂರ, ಶಕೀಲ ಸಂಶಿ, ವಿನೋದ ನವಲಗುಂದ ಇತರರು ಸಂಭ್ರಮದಲ್ಲಿ ಭಾಗವಹಿಸಿದ್ದರು.