

ಹುಬ್ಬಳ್ಳಿ: ಶ್ರಾವ್ಯ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ‘ಮಾರಕಾಸ್ತ್ರ’ ಚಲನಚಿತ್ರವು ಅ. 13ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ನಾಲ್ಕು ಹಾಡುಗಳಿವೆ. ನೈಜ ಘಟನೆ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಸಸ್ಪೆನ್ಷ್, ಥ್ರಿಲ್ಲರ್, ಕಮರ್ಷಿಯಲ್ ಸಿನಿಮಾ ಇದು. ಕುಟುಂಬ ಕುಳಿತು ನೋಡುವ ಚಲನಚಿತ್ರವನ್ನು ನೀಡಿದ್ದೇವೆ ಎಂದು ಖುಷಿ ಹಂಚಿಕೊಂಡರು.
ನಿರ್ಮಾಪಕ ಡಾ.ವಿ. ನಟರಾಜ ಮಾತನಾಡಿ, ಈ ಚಿತ್ರ ನಿರ್ಮಾಣಕ್ಕೆ ಬಹಳಷ್ಟು ಶ್ರಮ ಹಾಕಿದ್ದೇವೆ. ಚಿತ್ರ ತಂಡವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಮಾಲಾಶ್ರೀ, ಅಯ್ಯಪ್ಪ ಶರ್ಮಾ, ಮೈಕೋ ನಾಗರಾಜ, ಉಗ್ರಂ ಮಂಜು, ಶಿವಮಣಿ, ಶಶಿಧರ, ಭರತ್ ಇತರರು ಇದ್ದಾರೆ. ಸತೀಶ ಬಾಬು ಹಿನ್ನೆಲೆ ಸಂಗೀತ, ಅರುಣ್ ಸುರೇಶ ಛಾಯಾಗ್ರಹಣ, ಮಂಜುಕವಿ ಸಂಗೀತ, ಧನ್‌ಕುಮಾರ ಕ್ರಿಯೇಟಿವ್‌ಹೆಡ್ ಹಾಗೂ ನೃತ್ಯ ನಿರ್ದೇಶನ, ವಿರ್ಶವ ಎನ್.ಎಂ. ಸಂಕಲನ, ಥ್ರಿಲ್ಲರ್ ಮಂಜು, ಅರ್ಜುನ್ ಸಾಹಸ ಮಾಡಿದ್ದಾರೆ ಎಂದರು.
ನಾಯಕ ನಟ ಆನಂದ ಆರ್ಯ, ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಈ ಸಿನಿಮಾವನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ನಮಗೆ ಹೊಸ ಹುಮ್ಮಸ್ಸು ಸೃಷ್ಟಿಸಿದೆ. ಉತ್ತರ ಕರ್ನಾಟಕ ಭಾಗದವರೇ ಈ ಚಿತ್ರದ ನಿರ್ಮಾಪಕರಾಗಿರುವುದು ಸಂತಸದ ವಿಷಯ ಎಂದರು.
ಇದೇ ವೇಳೆ ಚಿತ್ರದ ಟೀಸರ್ ಮತ್ತು ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ನಟಿ ಸ್ವಾತಿ, ಶಶಿಧರ, ಅಯ್ಯಪ್ಪ ಶರ್ಮಾ, ಇತರರು ಇದ್ದರು.