ಮಾರಗೌಡನಹಳ್ಳಿ ಸೊಸೈಟಿ ಚುನಾವಣೆ: ಎಂ.ಸಿ.ಭಾಸ್ಕರ್, ಚಂದ್ರಮ್ಮ ಅವಿರೋಧ ಆಯ್ಕೆ

Maragowdanahalli Society Election mandya
Published on

ಮಂಡ್ಯ: ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಸಿ.ಭಾಸ್ಕರ್ ಹಾಗೂ ಉಪಾಧ್ಯಕ್ಷೆಯಾಗಿ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.

ವಿವಿಧ ಕಾರಣಕ್ಕೆ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಸಿ.ಭಾಸ್ಕರ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಚಂದ್ರಮ್ಮ ಬಿಟ್ಟು ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಜಿ.ಆರ್.ಜಗದೀಶ್ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು.

ನೂತನ ವರಿಷ್ಠರನ್ನು ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ವಸಂತರಾಜು, ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಟಿ.ರಾಜು, ನಾಗಲಿಂಗಯ್ಯ, ಚಿಕ್ಕಲಿಂಗಯ್ಯ, ರಾಮಲಿಂಗಯ್ಯ, ಶಿವಮಾದಶೆಟ್ಟಿ, ಪವಿತ್ರಾ, ಕೃಷ್ಣಯ್ಯ, ಹೆಬ್ಬಾರಯ್ಯ, ನಾಗಲಿಂಗೇಗೌಡ, ಮುದ್ದಲಿಂಗಯ್ಯ, ಎಂ.ಸಿ.ವರದರಾಜು, ಸಿಇಒ ಎಸ್.ಶಿವಕುಮಾರ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net