ಮರಗೋಡಿನಲ್ಲಿ ಕೈಲ್ ಮುಹೂರ್ತ ಗ್ರಾಮಾಂತರ ಆಟೋಟ ಸ್ಪರ್ಧೆ

6mdks4 - Copy
Published on

ಮರಗೋಡು: ವಿವೇಕಾನಂದ ಯುವಕ ಸಂಘ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ೫೧ನೇ ವರ್ಷದ ಗ್ರಾಮಾಂತರ ಆಟೋಟ ಸ್ಪರ್ಧೆ ನಡೆಯಿತು.

ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಆಟೋಟ ಸ್ಪರ್ಧೆಗೆ ಭಾರತಿ ಹೈಸ್ಕೂಲ್ ಸೊಸೈಟಿ ಉಪಾಧ್ಯಕ್ಷ ಕೋಚನ ಲವಿನ್ ತೆಂಗಿನ ಕಾಯಿಗೆ ಗುಂಡು ಹೊಡೆಯುವುದರ ಮೂಲಕ ಉದ್ಘಾಟಿಸಿದರು. ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಕ್ರೀಡಾಕೂಟಗಳು ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಲಿದೆ. ಪ್ರತಿಯೊಬ್ಬ ಯುವಜನ ಯಾವುದಾದರೂ ಒಂದು ಕ್ರೀಡೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.

ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ ಅಧ್ಯಕ್ಷತೆ ವಹಿಸಿದ್ದರು. ಕಾನಡ್ಕ ಪವನ್‌ಕುಮಾರ್ ಪ್ರಾರ್ಥಿಸಿದರು. ಬೊಳ್ಳೂರು ಸನತ್‌ಕುಮಾರ್ ಸ್ವಾಗತಿಸಿದರು. ಕಾನಡ್ಕ ಹನೀಶ್ ನಿರೂಪಿಸಿದರು. ಮಗೇರನ ಬೆಳ್ಯಪ್ಪ ವಂದಿಸಿದರು. ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ೨೮ ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಮರಗೋಡು ಗ್ರಾಪಂ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯಅತಿಥಿಗಳಾಗಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಎನ್. ಸತೀಶ್, ಹೊಸ್ಕೇರಿ ಗ್ರಾಪಂ ಸದಸ್ಯೆ ಬೊಳಿಯಾಡೀರ ಉಷಾ ತಂಗಮ್ಮ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕೆದಂಬಾಡಿ ಚಂದ್ರಕಲಾ, ಮರಗೋಡು ಗ್ರಾಪಂ ಸದಸ್ಯೆ ಇಟ್ಟಣಿಕೆ ನಾಗೇಶ್ ಪಾಲ್ಗೊಂಡಿದ್ದರು. ಕೆದಂಬಾಡಿ ಶಿವಪ್ರಸಾದ್ ನಿರೂಪಿಸಿದರು. ಮಗೇರನ ಬೆಳ್ಯಪ್ಪ ಸ್ವಾಗತಿಸಿದರು. ಕಾನಡ್ಕ ಹನೀಶ್ ನಿರೂಪಿಸಿದರು. ಮಾಳಿಗೆಮನೆ ವೆಂಕಟೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net