ಭಾರತ್ ಜೋಡೋ: ಸಂಚಾರ ಮಾರ್ಗ ಬದಲಾವಣೆ

IMG-20221006-WA007333
Published on

ಚಿತ್ರದುರ್ಗ: ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಅ. 10 ರಿಂದ 14ರವೆರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ. ಈ ವೇಳೆ ಭದ್ರತೆ, ಶಾಂತಿ, ಸುವ್ಯವಸ್ಥೆ ಕಾಪಾಡುವ ಹಾಗೂ ಮುಂಜಾಗ್ರತಾ ಕ್ರಮವಾಗಿ ಪಾದಯಾತ್ರೆ ಸಾಗುವ ಕಡೆಗಳಲ್ಲಿ ಸಾರ್ವಜನಿಕರ ಸಂಚಾರ ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

10, 11ರಂದು ಹುಳಿಯಾರು ಗಡಿಯಿಂದ ಚಳ್ಳಕೆರೆ ಗಡಿ, 12, 14ರಂದು ಚಳ್ಳಕೆರೆಯಿಂದ ಬಳ್ಳಾರಿ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ 150(ಎ) ರಸ್ತೆ ಸಂಚಾರ ನಿಷೇಧಿಸಿದ್ದಾರೆ.

ಹುಳಿಯಾರು ಹಿರಿಯೂರು ಮಧ್ಯ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ಬಳಸಿ ಶಿರಾ ಮಾರ್ಗವಾಗಿ ಸಂಚರಿಸಬೇಕು. ಹಿರಿಯೂರು ಮತ್ತು ಚಳ್ಳಕರೆಯಿಂದ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ಬಳಸಿ ಚಿತ್ರದುರ್ಗ ಪ್ರವೇಶಿಸಬಹುದು. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಮೂಲಕ ಬಳ್ಳಾರಿ ಕಡೆ ಸಾಗುವ ವಾಹನಗಳು ಹಿರಿಯೂರು, ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆ ಮಾರ್ಗವಾಗಿ ಸಾಗಬೇಕು ಎಂದು ತಿಳಿಸಿದ್ದಾರೆ.

ಬಳ್ಳಾರಿಯಿಂದ ಮೊಳಕಾಲ್ಮುರು ಮಾರ್ಗವಾಗಿ ಸಂಚರಿಸುವ ವಾಹನ ಹೊರತುಪಡಿಸಿ, ಚಳ್ಳಕೆರೆ, ಬಳ್ಳಾರಿ, ಬೆಂಗಳೂರಿನ ಕಡೆ ಚಲಿಸುವ ವಾಹನಗಳು ಹೊಸಪೇಟೆ, ಚಿತ್ರದುರ್ಗ ಅಥವಾ ಆಂಧ್ರಪ್ರದೇಶದ ಅನಂತಪುರ ಮಾರ್ಗವಾಗಿ ಚಲಿಸಬೇಕು ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net